ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ
ಧಾರವಾಡ: ವಿವಿಧ ಸಂಘಟನೆಗಳು ಆಯೋಜಿಸುವ ಕ್ರೀಡೆಗಳು ಗ್ರಾಮೀಣ ಭಾಗದಲ್ಲಿನ ಎಲೆಮರೆ ಕಾಯಿಯಂತಿರುವ ಕ್ರೀಡಾಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದು ಜಿಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ ಹೇಳಿದರು. ಫ್ರೆಂಡ್ಸ್ ಕ್ಲಬ್ ದಸರಾ ಪ್ರಯುಕ್ತ ಕೃಷಿ ವಿವಿಯಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಅಧ್ಯಕ್ಷತೆ ವಹಿಸಿದ್ದರು. ಸುಧೀರ ಕ್ಷತ್ರಿ, ಉದ್ಯಮಿ ಉದಯ ಶೆಟ್ಟಿ, ಕ್ಲಬ್ ಉಪಾಧ್ಯಕ್ಷ ವೀರೇಶ ಗೋಡಿಕಟ್ಟಿ, ವಿನೋದ ಕುಸುಗಲ್, ಮುತ್ತು ಮಡಿವಾಳರ, ಸಲೀಂ ಮಿಶ್ರಿಕೋಟಿ, ಪ್ರಶಾಂತ ಕ್ಷೀರಸಾಗರ, ಗಜಾನನ ಮುಶಣ್ಣವರ, ಪಾಂಡು ಉಪ್ಪಾರ, ಅಜಿತ ಬೋಗಾರ, ಪ್ರವೀಣ ಸಾಲಿ, ರಾಜೇಶ ಜಾಧವ, ಶಿವಾನಂದ ಕವಳಿ, ಮಂಜುನಾಥ ಹುಲಮನಿ, ಸುನೀಲ ಘಂಟಿ, ರವಿಕುಮಾರ ಉಳ್ಳಾಗಡ್ಡಿ ಇದ್ದರು.
ಧಾರವಾಡ: ನಾಳೆ ಎಸ್‌ಡಿಎಂ ಡಾಕ್ಟರ್
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಶರೀರ ರಚನಾ ಶಾಸ್ತ್ರ ವಿಭಾಗದ ಡಾ. ಅರುಣ ಕುಲಕರ್ಣಿ ಅ. 29ರಂದು ಸಂಜೆ 6.50ಕ್ಕೆ ಚಿಕಿತ್ಸೆಯಲ್ಲಿ ಆಧ್ಯಾತ್ಮಿಕತೆಯ ಪಾತ್ರ ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ದೂ. 0836-2443414 ಅಥವಾ 2443415 ಅಥವಾ 2443416ಗೆ ಸಂಪರ್ಕಿಸಬಹುದು.