ಇಂದು ಮಿನಿ ಉದ್ಯೋಗ ಮೇಳ
ಹುಬ್ಬಳ್ಳಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ತರಬೇತಿ ನಿಗಮ ನಿಯಮಿತದ ಸಂಯುಕ್ತ ಆಶ್ರಯದಲ್ಲಿ ಅ. 30ರಂದು ಹುಬ್ಬಳ್ಳಿಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರ ವರೆಗೆ ಈ ಉದ್ಯೋಗ ಮೇಳ ನಡೆಯಲಿದೆ. ಅಂದಿನ ದಿನದ ಉದ್ಯೋಗ ಮೇಳದಲ್ಲಿ ಬೆಳಗಾವಿಯ ಬೆಮ್ಕೊ ಹೈಡ್ರಾಲಿಕ್ಸ್, ಕ್ವೆಸ್ಟ್ ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಪ್ರೈ. ಲಿ, ಮೈಸೂರಿನ ಹಿಂದುಜಾ ಗ್ಲೋಬಲ್ ಸಲ್ಯೂಶನ್ಸ್, ಹುಬ್ಬಳ್ಳಿಯ ಹೈಕ್ಯೂರ್ ಫಾರ್ಮಾಸುಟಿಕಲ್ಸ್, ಕೋರಾಡಾ ಫರ್ನಿಚರ್ಸ್, ಅಂಕುಶ ಇಂಡಸ್ಟ್ರೀಸ್, ಹಾಂಡಾ ಗ್ರೂಪ್ಸ್, ಸಿದ್ಧೇಶ್ವರ ಕಂ, ರಿಚ್ ಇನ್ಫ್ರಾ ಡೆವಲಪರ್ಸ್, ಪ್ರೆಸೂಲ್ ಇನ್ಫೋಟೆಕ್, ಗುರು ಇಂಡಸ್ಟ್ರೀಸ್, ಎಂ.ಎಂ. ಜೋಷಿ ಐ ಇನ್ಸಿಟ್ಯೂಟ್, ಯುರೇಕಾ ಫೋರ್ಬ್ಸ್ ಹಾಗೂ ಬೆಂಗಳೂರಿನ ಇಂಡೊ-ಯುಎಸ್-ಮಿಮ್ ಮತ್ತಿತರ ಖಾಸಗಿ ರಂಗದ ಉದ್ಯೋಗದಾತರುಗಳು ಭಾಗವಹಿಸಿ ತಮ್ಮ ಸಂಸ್ಥೆಯಲ್ಲಿಯ ವಿವಿಧ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಎಸ್ಎಸ್ಎಲ್ಸಿ, ಪಿಯುಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಐಟಿಐ ಫಿಟ್ಟರ್, ಟರ್ನರ್, ಮಶಿನಿಸ್ಟ್, ಇಲೆಕ್ಟ್ರಿಶಿಯನ್, ವೆಲ್ಡರ್ ಹಾಗೂ ಇತರ ಡಿಪ್ಲೋಮಾ ಮೆಕ್ಯಾನಿಕಲ್, ಸಿಎನ್ಸಿ ಆಪರೇಟರ್ಸ್, ಎಂ.ಫಾರ್ಮಾ, ಬಿ.ಫಾರ್ಮಾ, ಪದವೀಧರರು ಸಂದರ್ಶನಕ್ಕೆ ಹಾಜರಾಗಬಹುದು.
ಈ ಅರ್ಹತ್ನೆ ಹೊಂದಿ ಸಂದರ್ಶನಕ್ಕೆ ಹಾಜರಾಗುವ ಇಚ್ಛೆ ಹೊಂದಿದ್ದಲ್ಲಿ ಹುಬ್ಬಳ್ಳಿಯ ನವನಗರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ ವಿದ್ಯಾರ್ಹತೆಯ ಎಲ್ಲ ಮೂಲ ಪ್ರಮಾಣ ಪತ್ರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಬಯೋಡೇಟಾದೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಅ. 30ರ ಬೆಳಗ್ಗೆ 9.30ಕ್ಕೆ ಹಾಜರಿರಲು ತಿಳಿಸಲಾಗಿದೆ. ಮಾಹಿತಿಗೆ ದೂ.ಸಂ. 0836-2225289 ಸಂಪರ್ಕಿಸಲು ತಿಳಿಸಲಾಗಿದೆ.