ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಾಧನೆಗೆ ಸಂವಹನ ಕಲೆ ಅವಶ್ಯ

Vishwanath S
Updated On : 31 Oct 2013, 12:17 pm

ಧಾರವಾಡ: ಪ್ರತಿಯೊಬ್ಬರಿಗೂ ಜೀವನದಲ್ಲಿ ಅನನ್ಯ ಸಾಧನೆ ಮಾಡಲು ಶಿಕ್ಷಣದೊಂದಿಗೆ ಉತ್ತಮ ಸಂವಹನ ಕಲೆ ಅಗತ್ಯ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಕಟ್ಟಿಮನಿ ಹೇಳಿದರು.
ಕರ್ನಾಟಕ ಕಾಲೇಜಿನ ವ್ಯವಸ್ಥಾಪನ ಕಟ್ಟಡದ ಸಭಾಂಗಣದಲ್ಲಿ ಬುಧವಾರ ನಡೆದ ಎರಡು ದಿನಗಳ ವೃತ್ತಿಪರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಲಿಕೆ ಮಾತ್ರ ಮುಖ್ಯವಲ್ಲ. ಕಲಿತ ವಿಷಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಸಾಧಿಸುವ ಕಲೆ ಕರಗತವಾಗಬೇಕು. ಅಂದಾಗ ಮಾತ್ರ ಶಿಕ್ಷಣಕ್ಕೆ ಸಾರ್ಥಕತೆ ಲಭಿಸುತ್ತದೆ ಎಂದರು.
ಪ್ರಸ್ತುತ ವಿಶ್ವವಿದ್ಯಾಲಯ, ಕಾಲೇಜುಗಳು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ವ್ಯಕ್ತಿತ್ವ ಮಾರ್ಗದರ್ಶನ ಕೇಂದ್ರಗಳನ್ನು ಆರಂಭಿಸಿದ್ದರೂ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಮನೋಭಾವನೆ ಬದಲಾಗಬೇಕಿದ್ದು, ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ವಿ.ಎಚ್. ಅರಳಿ, ಪ್ರತಿಯೊಬ್ಬರಿಗೂ ಮಾರ್ಗದರ್ಶನವೆಂಬುದು ಬಹುಮುಖ್ಯ. ಅನೇಕ ಸಂದರ್ಭಗಳಲ್ಲಿ ಎಲ್ಲ ರೀತಿಯ ಅರ್ಹತೆಗಳಿದ್ದರೂ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದ ವಿಫಲರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಶಿಕ್ಷಣದ ಪ್ರಮುಖ ಹಂತಗಳಲ್ಲಿ ಮುಂದಾಲೋಚನೆ ಮಾಡಿ, ತಜ್ಞರಿಂದ ಮಾರ್ಗದರ್ಶನ ಪಡೆದು ನಿರ್ಧಾರ ಕೈಗೊಳ್ಳಬೇಕು ಎಂದರು.
ಕರ್ನಾಟಕ ಕಾಲೇಜಿನ ಸ್ನಾತಕೋತ್ತರ ಕೋರ್ಸ್‌ಗಳ ಮುಖ್ಯ ಸಂಯೋಜಕ ಡಾ. ಎನ್.ಜಿ. ಚಚಡಿ, ಡಾ. ಬಿ.ಎನ್. ಮಲ್ಲೂರ, ಪ್ರೊ. ಬಿ.ಬಿ. ಬಿರಾದಾರ, ಡಾ. ಎಸ್.ಕೆ. ಪವಾರ, ಡಾ. ಆರ್.ಎಲ್. ಜಾಡರ, ರಾಜೀವ ಹಿರೇಮಠ, ಪ್ರೊ. ಕಾಂಚನಾ ಗಾಂವಕರ, ಪ್ರೊ. ಸುಕನ್ಯಾ ಜಾಲಿಹಾಳ, ಪ್ರೊ. ಜೆ. ಮಾಡ್ತಾ, ಪ್ರೊ. ಎಸ್.ಪಿ. ಭಟ್ ಇದ್ದರು. ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ನಡೆದ ಗೋಷ್ಠಿಗಳಲ್ಲಿ ಬೆಂಗಳೂರಿನ ವೆಂಕಟರಾಮಯ್ಯ ಹಾಗೂ ಗಿರೀಶ ಅಂಗಡಿ ವ್ಯಕ್ತಿತ್ವ ವಿಕಸನ, ಸಂವಹಣ ಕಲೆ, ವಿದ್ಯುನ್ಮಾನದ ಮೂಲತತ್ವಗಳು ಕುರಿತು ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement