ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

5 ಸ್ಥಳದಲ್ಲೇ ಸಾವು, ಐವರಿಗೆ ಗಾಯ

Lingaraj Badiger
Updated On : 1 Nov 2013, 11:20 am

ಹುಬ್ಬಳ್ಳಿ: ಗೋವಾದಲ್ಲಿ ಆರತಕ್ಷತೆ ಮುಗಿಸಿ ಕೊಪ್ಪಳಕ್ಕೆ ಹೊರಟಿದ್ದ ಮದುವೆ ದಿಬ್ಬಣದ ವಾಹನ ಗುರುವಾರ ಬೆಳಗ್ಗೆ ಅಣ್ಣಿಗೇರಿ-ಭದ್ರಾಪುರ ಮಧ್ಯೆ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಐವರು ಮೃತಪಟ್ಟಿದ್ದು, ಇನ್ನೂ ಐವರು ಗಾಯಗೊಂಡು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಗೋವಾದಲ್ಲಿ ನಡೆದ ವಧುವರರ ಆರತಕ್ಷತೆಯಲ್ಲಿ ಪಾಲ್ಗೊಂಡು ಹುಬ್ಬಳ್ಳಿ ಮುಖಾಂತರ ಕೊಪ್ಪಳ ವರನ ಮನೆಗೆ ಕೊಪ್ಪಳ, ಗದಗನಲ್ಲಿರುವ ಸಂಬಂಧಿಕರು ಟವೇರಾದಲ್ಲಿ ಹೋಗುತ್ತಿದ್ದರು. ಅಣ್ಣಿಗೇರಿ-ಭದ್ರಾಪುರ ಮಧ್ಯೆ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗೆ ಮುಖಾಮುಖಿ ಡಿಕ್ಕಿಯ ರಭಸಕ್ಕೆ ಟವೇರಾ 3-4 ಪಲ್ಟಿ ಹೊಡೆದು ಬಿದ್ದಿದೆ. ಅಪಘಾತ ತೀವ್ರತೆಗೆ ಐವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಪುರುಷರು ಇಬ್ಬರು ಮಹಿಳೆಯರು, ಮಗು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟವರು ಕೊಪ್ಪಳದ ಜರೀನಾ ಮಹಬೂಬ್‌ಸಾಬ್ ಗದಗವಾಲೆ, ಸರಿಫೋನಾ ಉಸ್ಮಾನ್ ಅಡ್ಡೆವಾಲೆ, ಅಸ್ಲಂ ಗೌಸುಸಾಬ್ ಕರ್ಜಗಿ, ಮಹ್ಮದ್‌ಅಲಿ ಒಂಟಿಹಳ್ಳಿ. ಅಪಘಾತದಲ್ಲಿ ಮೃತಪಟ್ಟ 10-12 ವರ್ಷದ ಬಾಲಕನ ಹೆಸರು ವಿಳಾಸ ತಿಳಿದುಬಂದಿಲ್ಲ. ಶವಗಳನ್ನು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಗಾಯಗೊಂಡವರನ್ನು ತಕ್ಷಣ ಚಿಕಿತ್ಸೆಗೆ ಕಿಮ್ಸ್‌ಗೆ ತರಲಾಗಿದೆ. ಕಿಮ್ಸ್‌ಗೆ ದಾಖಲಿಸಿದವರ ಪೈಕಿ ಅಮೀರ್ ಖಾನ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನುಳಿದವರಿಗೆ ಕೈಕಾಲು, ತಲೆ ಮತ್ತು ಎದೆಗೆ ಭಾರಿ ಹೊಡೆತ ಬಿದ್ದಿದೆ. ಗಾಯಗೊಂಡವರನ್ನು ಕೊಪ್ಪಳ ನಗರದ ಪಲಕಿ ಲೇಔಟ್‌ನ ಸಿರಾಜ್ ಅಹ್ಮದ್, ಮಾಬುಸಾಬ್ ರಾಜೇಸಾಬ್, ಅಂಜುಮಾ ಮಾಬುಸಾಬ್, ಗದಗನ ರೇಹಾನ್ ಅಶ್ರಫ್ ಮತ್ತು ಅಮೀರ್‌ಖಾನ್ ಎಂದು ಗುರುತಿಸಲಾಗಿದೆ. ಪ್ರಕರಣ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement