ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎಟಿಎಂ ಸ್ಥಾಪನೆಗೆ ಮುಂದಾದ ಕೆವಿಜಿ ಬ್ಯಾಂಕ್

Vishwanath S
Updated On : 3 Sept 2013, 11:19 am

ಧಾರವಾಡ: ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಸಕ್ತ ವರ್ಷದಲ್ಲಿ 75 ಎಟಿಎಂಗಳನ್ನು ತೆರೆಯಲು ಮುಂದಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ನಿರ್ದೇಶಕ ಸುಧೀರಕುಮಾರ ಜೈನ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬ್ಯಾಂಕ್ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ವಿನೂತನ ಯೋಜನೆಗಳನ್ನು ಹಾಕಿಕೊಂಡಿದೆ. ಸರ್ಕಾರದ ನಿರ್ದೇಶನದಂತೆ ಗ್ರಾಹಕರ ಅನುಕೂಲಕ್ಕಾಗಿ ಕೀಯೋಸ್ಕ ಕಿರು ಎಟಿಎಂ ಯಂತ್ರಗಳನ್ನು ಅನುಷ್ಠಾನಗೊಳಿಸಿದೆ. ಅಲ್ಲದೆ, ಈ ಬ್ಯಾಂಕ್ 2013ರಲ್ಲಿ ಒಟ್ಟು ರು. 194.58 ಕೋಟಿ ನಿವ್ವಳ ಲಾಭ ಗಳಿಸಿದ್ದು, ಅತ್ಯಧಿಕ ಲಾಭ ಗಳಿಸಿದ ಬ್ಯಾಂಕ್ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದರು.
ಸರ್ಕಾರಿ ಯೋಜನೆಗಳ ಫಲಾನುಭವಿಗಳ ಆಧಾರ್ ಮೇಲೆ ಖಾತೆಗೆ ಬ್ಯಾಂಕ್ ನೇರ ಹಣ ಜಮೆ ಮಾಡುತ್ತಿದೆ. ಇಲ್ಲಿಯವರೆಗೆ ಜನನಿ ಸುರಕ್ಷಾ ಯೋಜನೆಯಡಿಯಲ್ಲಿ 504 ಫಲಾನುಭವಿಗಳಿಗೆ ರು. 3.60 ಲಕ್ಷ ಹಣ ನೇರವಾಗಿ ಜಮೆ ಮಾಡಿದೆ ಎಂದರು.
ಗ್ರಾಮೀಣ ಗ್ರಾಹಕರ ಆರ್ಥಿಕ ಸಾಕ್ಷರತೆ ಹೆಚ್ಚಿಸಲು 9 ಆರ್ಥಿಕ ಸಾಕ್ಷರತಾ ಕೇಂದ್ರ ಸ್ಥಾಪಿಸಿದೆ. ಈ ಕೇಂದ್ರಗಳಲ್ಲಿ 871 ಜನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, 9 ಜನ ಸಲಹೆಗಾರರು ಹಾಗೂ 195 ಜನ ಬಾಹ್ಯ ಚಟುವಟಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯ ಸಬಲೀಕರಣಕ್ಕಾಗಿ ಬ್ಯಾಂಕ್ ವತಿಯಿಂದ ಅನೇಕ ಯೋಜನೆ ಹಾಕಿಕೊಳ್ಳಲಾಗಿದೆ. ಅದರಂತೆ ಬ್ಯಾಂಕ್‌ನ 524 ಶಾಖೆಗಳಲ್ಲಿ ಮಹಿಳಾ ದಿನಾಚರಣೆ ಆಚರಿಸಿತು. ಅಂತೆಯೇ, 7839 ಮಹಿಳಾ ಫಲಾನುಭವಿಗಳಿಗೆ ರು. 7505.81 ಲಕ್ಷ ಸಾಲ ನೀಡಿದೆ ಎಂದು ವಿವರಿಸಿದರು.
ಪ್ರಸಕ್ತ ವರ್ಷದಲ್ಲಿ ಸಿಂಡಿಕೇಟ್ ಬ್ಯಾಂಕ್ ಸಹ 200 ನೂತನ ಶಾಖೆ ಆರಂಭಿಸಲಿದೆ. ಅಲ್ಲದೆ, 3500 ಎಟಿಎಂಗಳನ್ನು ತೆರೆಯಲಿದೆ ಎಂದ ಅವರು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಪ್ರಧಾನ ಕಚೇರಿ ಧಾರವಾಡದಲ್ಲಿದ್ದು, ಬಾಗಲಕೋಟೆ, ವಿಜಾಪುರ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉತ್ತರಕನ್ನಡ, ದಕ್ಷಿಣಕನ್ನಡ ಹಾಗೂ ಉಡುಪಿಗಳಲ್ಲಿ 9 ಪ್ರಾದೇಶಿಕ ಕಚೇರಿ ಹೊಂದಿದ್ದು, 525 ಶಾಖೆಗಳು, 5 ವಿಸ್ತರಣೆ ಶಾಖೆಗಳು ಹಾಗೂ 50 ಅತೀ ಕಿರು ಶಾಖೆಗಳನ್ನು ಹೊಂದಿದೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ ಎಂದರು.
ವಿವಿಧ ಬ್ಯಾಂಕ್‌ನ ಜನರಲ್ ಮ್ಯಾನೇಜರ್‌ಗಳಾದ ಪ್ರೀತಮ್ ಲಾಲ್, ಸುಧೀರ ಚಂದರಕ, ಸಿ. ಸಾಂಬಶಿವರೆಡ್ಡಿ ಹಾಗೂ ಪಿಆರ್‌ಒ ಉಲ್ಲಾಸ ಗುನಗಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement