ಕ್ಲಬ್‌ವಾದಿಗಳ ಪ್ರತಿಭಟನೆಗೆ ಪಾಪು ಸ್ವಾಗತ
ಹುಬ್ಬಳ್ಳಿ: ರಿಕ್ರಿಯೆಷನ್ ಕ್ಲಬ್ ಬೇಕು ಎಂದು ನನ್ನ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವ ರಿಕ್ರಿಯೇಷನ್ ಕ್ಲಬ್‌ನ ಪದಾಧಿಕಾರಿಗಳ ತೀರ್ಮಾನಕ್ಕೆ ನನ್ನ ಸ್ವಾಗತವಿದೆ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಶೆಟ್ಟರ್ ಕ್ಲಬ್ ಪರವಾಗಿ ಪ್ರತಿಭಟನೆಗೆ ಇಳಿಯಲಿ ಎಂದಿದ್ದಾರೆ. ಕ್ಲಬ್ ಪರವಾಗಿ ಹೋರಾಟ ಮಾಡುವವರಿಗೆ ಶಾಮಿಯಾನಾ, ಕುಡಿವ ನೀರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಕ್ಲಬ್ ವಿರೋಧಿ ಬಣ ಮಾಡಿಕೊಡಲಿದೆ ಎಂದು ತಿಳಿಸಿದ್ದಾರೆ. ಗ್ರೌಂಡ್ ಬಚಾವೋ ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗ್ಡೆ ಅವರು, ಶಾಲೆ, ಆಸ್ಪತ್ರೆ, ದೇವಸ್ಥಾನ ಇರುವ ಪ್ರದೇಶದಲ್ಲಿ ಕುಡಿತ, ನಂಗಾನಾಚ್‌ಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಹೋರಾಟ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಹುಬ್ಬಳ್ಳಿಗರು ಸಮ್ಮತಿಸುವರೇ ಎಂದು ಪ್ರಶ್ನಿಸಿದ್ದಾರೆ. ಪಾಟೀಲ ಪುಟ್ಟಪ್ಪ ಅವರ ಮನೆ ಎದುರು ಕ್ಲಬ್‌ನವರು ಮಾಡುವ ಧರಣಿ ನೋಡುವ ಅವಕಾಶ ಇಲ್ಲಿನವರಿಗೆ ದೊರೆಯಲಿ ಎಂದು ಕುಮಾರ ದೇಸಾಯಿ, ಎಸ್.ಎಸ್. ಪಾಟೀಲ, ಹೂವಪ್ಪ ದಾಯಗೋಂಡಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.