ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಚನ ಶ್ರಾವಣ ಮಂಗಲೋತ್ಸವ ಕಾರ್ಯಕ್ರಮ

Vishwanath S
Updated On : 3 Sept 2013, 11:19 am

ಹುಬ್ಬಳ್ಳಿ: ಬಸವಣ್ಣನವರ ವಿಶಿಷ್ಟ ಕೊಡುಗೆ ಕಾಯಕ, ದಾಸೋಹ ಸಿದ್ಧಾಂತ. ವ್ಯಕ್ತಿಯ ಅಂತರಂಗ, ಬಹಿರಂಗ ಶುದ್ದಿಗೆ ಇದು ಪೂರಕ ಎಂದು ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿ ಹೇಳಿದರು.
ನಗರದ ಬಸವ ಕೇಂದ್ರ ಏರ್ಪಡಿಸಿದ್ದ ವಚನ ಶ್ರಾವಣ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವೈಯಕ್ತಿಕ ಉನ್ನತಿ ಜೊತೆಗೆ ಸಮಾಜದ ಅಭಿವೃದ್ಧಿಗೂ ಶ್ರಮಿಸಬೇಕು ಎಂದರು. ನಂಬಿಕೆ, ವಿಶ್ವಾಸ, ಶ್ರದ್ಧೆ ವ್ಯಕ್ತಿಯಲ್ಲಿ ಇರಬೇಕು. ಇವುಗಳು ಇದ್ದರೆ ಜೀವನದಲ್ಲಿ ಯಶಸ್ಸು ಬರುತ್ತದೆ. ಶರಣರ ಚಿಂತನೆಗಳು ಮನುಷ್ಯನ ನೈತಿಕತ್ನೆ ಹೆಚ್ಚಿಸುತ್ತವೆ. ಮನುಷ್ಯನಿಗೆ ಜೀವ ಇರುವಾಗ ಬೆಲೆಯೇ ಹೊರತು ಸತ್ತ ಮೇಲಲ್ಲ. ಇಂಥ ಬೆಲೆ ಆತನಿಗೆ ಬರಬೇಕಾದರೆ ನಿಸ್ವಾರ್ಥ ಜೀವನ ನಡೆಸಬೇಕು. ಬಸವಣ್ಣನವರ ತತ್ವಾದರ್ಶಗಳು ಸರ್ವಕಾಲಿಕವಾಗಿವೆ ಎಂದರು. ಬಸವಕೇಂದ್ರದ ಅಧ್ಯಕ್ಷ ಡಾ. ಬಿ.ವಿ. ಶಿರೂರ ಪ್ರಾಸ್ತಾವಿಕ ಮಾತನಾಡಿದರು. ಬಸವ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ತೆಗೆದುಕೊಂಡ ಜಾಗಕ್ಕೆ ದೇಣಿಗೆ ಸಲ್ಲಿಸಿದವರನ್ನು ಸನ್ಮಾನಿಸಿಲಾಯಿತು. ರಾಜು ಅಣೆಪ್ಪನವರ, ಡಾ. ಪ್ರಸಾದ ರೂಡಗಿ, ಡಾ. ವಿಭಾವತಿ ಖಾನಾಪುರಿ, ಕೆ.ಎಸ್. ಇನಾಮತಿ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ, ಶಂಕರ ಕೋಳಿವಾಡ, ಡಿ.ಡಿ. ಹೊರಕೇರಿ, ಶಿವಯೋಗಿ ಮೂರ್ಖಂಡಿ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಉಮಾ ಹುಲಿಕಂತಿಮಠ, ನಿಲಾಂಬಿಕಾ ಇನಾಮತಿ, ಗುರುರಾಜ ಜಾಡಗೌಡರ, ಐ.ಎಸ್. ಬಿರಾದರಪಾಟೀಲ, ಬಸವರಾಜ ಶೇಡಬಾಳ, ಬಸವರಾಜ ಎಕಲಾಸಪುರ, ಸುನೀತಾ ಬ್ಯಾಹಟ್ಟಿ ಡಾ. ಸ್ನೇಹಾ ಭೂಸನೂರ, ವಿ.ವಿ. ಶೀರಿ, ಕುಮಾರಗೌಡ ಪಾಟೀಲ ಮತ್ತಿತರರು ಇದ್ದರು. ಜಿ.ಎಸ್. ಉಮದಿ ಪ್ರಾರ್ಥಿಸಿದರು ಪ್ರೊ.ಎಸ್.ಸಿ. ಇಂಡಿ ಸ್ವಾಗತಿಸಿದರು. ಗ್ರಂಥಪಾಲಕ ಸುರೇಶ ಹೊರಕೇರಿ ನಿರೂಪಿಸಿದರು. ಬಿ.ಎಲ್. ಲಿಂಗಶೆಟ್ಟರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement