ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬೇಡಿಕೆ ಈಡೇರಿಕೆ: ವಾರದ ಗಡವು

Vishwanath S
Updated On : 4 Sept 2013, 12:37 pm

ಧಾರವಾಡ: ಪ್ರಾಚಾರ್ಯರ ಬದಲಾವಣೆ ಹಾಗೂ ಪ್ರಾಧ್ಯಾಪಕರ ಅಮಾನತು ಕುರಿತಂತೆ ಇಲ್ಲಿನ ಕಿಟಲ್ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟಕ್ಕೆ ಮಂಗಳವಾರ ಆಡಳಿತ ಮಂಡಳಿ ಬೇಡಿಕೆ ಈಡೇರಿಕೆಗೆ ಒಂದು ವಾರದ ಗಡುವು ಪಡೆದಿದೆ.
ಪ್ರಾಧ್ಯಾಪಕ ಡಾ. ಜಿ.ಆರ್. ವಿಕ್ಟರ್ ಅಮಾನತು ಹಾಗೂ ಪ್ರಾಚಾರ್ಯರ ಬದಲಾವಣೆ ಕುರಿತಂತೆ ಕಳೆದ ಆ. 30ರಂದು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇಲ್ಲಿನ ಹಳಿಯಾಳ ನಾಕಾ ಬಳಿಯಿರುವ ಆಡಳಿತ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನೆ ನಡೆಸಿದ್ದರು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಮಂಗಳವಾರ ಮತ್ತೆ ತರಗತಿ ತ್ಯಜಿಸಿ ಪ್ರತಿಭಟನೆಗೆ ಮುಂದಾಗಿದ್ದರು.
ಈ ಸಂದರ್ಭ ಆಡಳಿತ ಮಂಡಳಿ ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಸಮಜಾಯಿಸಿದರು. ಅಲ್ಲದೆ, ಒಂದು ವಾರದೊಳಗಾಗಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅಲ್ಲದೆ, ಸರ್ಕಾರಿ ಕೆಲಸವಾದ್ದರಿಂದ ಪ್ರಾಧ್ಯಾಪಕರ ಮರು ನೇಮಕಾತಿ ಮತ್ತು ಪ್ರಾಚಾರ್ಯರ ಬದಲಾವಣೆ ಹಂತ ಸ್ವಲ್ಪ ತಡವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತರಗತಿ ತ್ಯಜಿಸಬಾರದೆಂದು ಮನವಿ ಮಾಡಿದೆ.
ಆಡಳಿತ ಮಂಡಳಿಯ ಆರ್.ಎಚ್. ಜೋಗುರ, ಡಾ. ಜಿ.ವಿ. ವಿಕ್ಟರ್, ಎಬಿವಿಪಿಯ ಮಹೇಶ ಹೆಂಬ್ಲಿ, ಶರಣು ಅಂಗಡಿ, ಡಾ.ಎನ್.ಬಿ. ಸಂಗಾಪುರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement