ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಿಂದುಳಿದ ಪ್ರದೇಶ ಅಭಿವೃದ್ಧಿಗೆ ಸಹಕರಿಸಿ

Vishwanath S
Updated On : 6 Sept 2013, 11:00 am

ಧಾರವಾಡ: ಇನ್ಮುಂದೆ ಧಾರವಾಡದ 50 ಸರ್ಕಾರಿ ಶಾಲೆ ಮಕ್ಕಳು ತಮ್ಮ ಕೈಯಲ್ಲಿ ಟ್ಯಾಬ್ ಹಿಡಿದು ಶಾಲೆಗೆ ಹೋಗುವುದನ್ನು ನೋಡಬಹುದು. ಲ್ಯಾಪ್‌ಟಾಪ್, ಪ್ರೊಜೆಕ್ಟರ್ ಮೂಲಕ ಪಾಠ ಕೇಳುವುದು, ಮಾಹಿತಿ ಪಡೆಯುವುದನ್ನೂ ಕಾಣಬಹುದು.
ರಾಜ್ಯದ ಪ್ರಮುಖ ಪ್ರಾಪರ್ಟಿ ವೆಬ್‌ಸೈಟ್ ಟಿಜಿಎಸ್‌ಇ ಕಾಂ, ಡ್ರೀಮ್ಸ್ ಜಿಕೆ ಸಂಸ್ಥೆಗಳು ಸರ್ಕಾರಿ ಶಾಲೆ ಮಕ್ಕಳು ತಾಂತ್ರಿಕವಾಗಿ ಬೆಳೆಯಬೇಕೆಂಬ ಉದ್ದೇಶದಿಂದ ಗುರುವಾರ ಇಲ್ಲಿನ ಮಗದುಮ್ಮ ಸಭಾಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಧಾರವಾಡ ತಾಲೂಕಿನ 50 ಸರ್ಕಾರಿ ಶಾಲೆ 500 ಮಕ್ಕಳಿಗೆ ರು. 70 ಲಕ್ಷದಲ್ಲಿ ಇ ಕಲಿಕೆ ಸಾಮಗ್ರಿ ಉಚಿತ ವಿತರಿಸುವ ಸಾಂಕೇತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಸಂತೋಷ ಲಾಡ್, ಸರ್ಕಾರಿ ಶಾಲೆಗಳ ಮಕ್ಕಳಿಗೆ ತಂತ್ರಜ್ಞಾನದ ಟಚ್ ಒದಗಿಸಿದ್ದು, ಉದ್ಯಮಿಗಳು ಬಡ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಕೈ ಜೋಡಿಸಿ ಎಂದರು.
ಹೆಬ್ಬಳ್ಳಿ ಸರ್ಕಾರಿ ಶಾಲೆ ಶಿಕ್ಷಕರು, ಮಕ್ಕಳಿಗೆ ಟ್ಯಾಬ್, ಲ್ಯಾಪ್‌ಟಾಪ್ ವಿತರಿಸಿದ ಟಿಜಿಎಸ್‌ಇ ಕಾಂ ವ್ಯವಸ್ಥಾಪಕ ನಿರ್ದೇಶಕಿ ಮನದೀಪ ಕೌರ್, ಸರ್ಕಾರಿ ಶಾಲೆ ಮಕ್ಕಳಿಗೆ ಇ-ತಂತ್ರಜ್ಞಾನ ಯೋಜನೆ ಜಾರಿಗೊಳಿಸಿದ್ದು, ಇದರ ಯಶಸ್ವಿ ಬಳಿಕ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೂ ಯೋಜನೆ ವಿಸ್ತರಿಸಲಾಗುವುದು ಎಂದರು.
ಶಾಸಕರು ಮೆಚ್ಚಿದ ಶಿಕ್ಷಕ ಪ್ರಶಸ್ತಿ ವಿತರಿಸಿದರು. ಮುರುಘಾಮಠದ ಮಲ್ಲಿಕಾರ್ಜುನ ಶ್ರೀ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಸಚಿನ ನಾಯ್ಕ್,  ಶಾಸಕ ವಿನಯ ಕುಲಕರ್ಣಿ, ಡಾ. ಬಿಕೆಎಸ್ ವರ್ಧನ್, ಐ.ಎ. ಪಾಟೀಲ, ಶ್ರೀಶೈಲ ಹುದ್ದಾರ, ವಿಜಯ ಕುಲಕರ್ಣಿ, ಬಿಇಒ ಗಿರೀಶ ಪದಕಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement