ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

11ರಂದು ವಿವೇಕ ಮ್ಯಾರಥಾನ್ ಭಾರತ ಜಾಗೃತಿ ಓಟ

Lingaraj Badiger
Updated On : 7 Sept 2013, 11:44 am

ಹುಬ್ಬಳ್ಳಿ: ಸ್ವಾಮಿ ವಿವೇಕಾನಂದ ಅವರ 150ನೇ ಜಯಂತಿ ನಿಮಿತ್ತ ನಗರದ ವಿವಿಧ ಸ್ಥಳಗಳಿಂದ ಸೆ. 11ರಂದು ಭಾರತ ಜಾಗೃತಿ ಓಟ 'ವಿವೇಕ ಮ್ಯಾರಥಾನ್‌' ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿ ರಾಜ್ಯ ಸಹಕಾರ್ಯದರ್ಶಿ ಡಾ. ರಘು ಅಕ್ಮಂಚಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿ ರಚಿಸಲಾಗಿದ್ದು, ರಾಜ್ಯದಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ. 11ರಂದು ಭಾರತ ಜಾಗೃತಿ ವಿವೇಕ ಮ್ಯಾರಥಾನ್ ಬೆಳಗ್ಗೆ 10:30ಕ್ಕೆ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಿಂದ, ಅದೇ ದಿನ ಬೆಳಗ್ಗೆ 11ಕ್ಕೆ ಶಿರೂರ ಪಾರ್ಕ್‌ನ ಸುಕೃತಿ ಕಾಲೇಜು, ಅಕ್ಷಯ ಪಾರ್ಕ್‌ನಿಂದ 11ಕ್ಕೆ, ಹಳೇ ಹುಬ್ಬಳ್ಳಿ ಅಂಬೇಡ್ಕರ್ ಮೈದಾನದಿಂದ ಬೆಳಗ್ಗೆ 10:30ಕ್ಕೆ ಮೂರು ಸಾವಿರ ಮಠದ ಮೈದಾನದಿಂದ ಬೆಳಗ್ಗೆ 11ಕ್ಕೆ, ಕೇಶ್ವಾಪುರದ ಸರ್ವೋದಯ ವೃತ್ತದಿಂದ 11ಕ್ಕೆ ವಿವೇಕ ಮ್ಯಾರಾಥಾನ್ ಓಟ ಆರಂಭವಾಗಿ ನೆಹರು ಮೈದಾನವನ್ನ ಮಧ್ಯಾಹ್ನ 12ಕ್ಕೆ ತಲುಪಲಿದ್ದು, ಅಲ್ಲಿ ಸಭೆಯಾಗಿ ಮಾರ್ಪಡಲಿದೆ ಎಂದರು.  ಭಾರತ ಜಾಗೃತಿ ವಿವೇಕ ಮ್ಯಾರಥಾನ್ ಓಟದಲ್ಲಿ ನಗರದ ಅಂದಾಜು 8-10 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ವಿವೇಕ ಮ್ಯಾರಾಥಾನ್ ಕುರಿತಂತೆ ಹುಬ್ಬಳ್ಳಿ ನಗರದ 36  ಸಾವಿರಕ್ಕೂ ಹೆಚ್ಚು ಮನೆಗಳನ್ನು ಕರಪತ್ರದ ಮುಖಾಂತರ ಸಂಪರ್ಕಿಸಲಾಗಿದೆ. ಮ್ಯಾರಾಥಾನ್‌ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಡಿಸೆಂಬರ್ 11, 1893ರಂದು ಚಿಕ್ಯಾಗೋದಲ್ಲಿ ಸ್ವಾಮೀಜಿ ವಿವೇಕಾನಂದ ಅವರು ಮಾಡಿರುವ ಭಾಷಣದ ಪ್ರತಿ ನೀಡಲಾಗುವುದು.
ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗ ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿ ವತಿಯಿಂದ ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವೇಕಾನಂದ ಅವರ ಜೀವನ ಕುರಿತು ಕನ್ನಡ ಚಲನ ನಿರ್ದೇಶಕ ನಾಗಾಭರಣ ಅವರು 20 ನಿಮಿಷದ ಕಿರು ಚಿತ್ರ ಮಾಡಿದ್ದು, ಈ ಕಿರು ಚಿತ್ರವನ್ನು ಪ್ರದರ್ಶಿಸಲಾಗುವುದು. ಯುವಭಾರತ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ವಿವೇಕಾನಂದರ ಜೀವನ ಅವರ ಚಿಂತನ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಅಂತಿಮವಾಗಿ ವಿಜೇತ ವಿದ್ಯಾರ್ಥಿಗಳನ್ನು ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ ಅವರ ಬೃಹತ್ ಮೂರ್ತಿಯ ಬಳಿ ಬಹುಮಾನ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಯೋಜಕ ವಿನಾಯಕ ತಲಗೇರಿ, ನಗರ ಸಂಯೋಜಕ ಸಂದೀಪ ಬೂದಿಹಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement