ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: 12, 13ರಂದು ರಾಷ್ಟ್ರೀಯ ಸಂಗೀತೋತ್ಸವ

Vishwanath S
Updated On : 8 Sept 2013, 11:33 am

ಧಾರವಾಡ: ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರ 21ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಸೆ. 12 ಹಾಗೂ 13ರಂದು ರಾಷ್ಟ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ.
12ರಂದು ಬೆಳಗ್ಗೆ 9ಕ್ಕೆ ಮಲ್ಲಿಕಾರ್ಜುನ ಮನ್ಸೂರ್ ಸಮಾಧಿ ಪೂಜೆ ನಡೆಯಲಿದ್ದು, 9.30ರಿಂದ ಮಧ್ಯಾಹ್ನ 12ರ ವರೆಗೆ ಖ್ಯಾತ ಗಾಯಕರಾದ ಉಜಿರೆಯ ಮಿಥುನ ಚಕ್ರವರ್ತಿ, ಧಾರವಾಡದ ನೀಲಾ ಕೊಡ್ಲಿ, ಪಂ. ರಾಜಶೇಖರ ಮನ್ಸೂರ್ ಸಂಗೀತ ಪ್ರಸ್ತುತಪಡಿಸುತ್ತಾರೆ. ಸಂಜೆ 7ರಿಂದ ಮಧ್ಯಪ್ರದೇಶದ ಡಾ. ರಾಗಿಣಿ ತ್ರಿವೇದಿ, ಧಾರವಾಡದ ಡಾ. ಮೃತ್ಯುಂಜಯ ಅಂಗಡಿ, ಮುಂಬೈನ ಪಂ. ರೋಣು ಮುಜುಂದಾರ, ಪಂ. ಉಲ್ಲಾಸ ಬಾಪಟ್ ಸಂಗೀತದ ರಸದೌತಣ ನೀಡಲಿದ್ದಾರೆ. ಸೆ. 13ರಂದು ಸಂಜೆ 6.30 ರಿಂದ 9.30ರ ವರೆಗೆ ಖ್ಯಾತ ಗಾಯಕರಾದ ಪುಣೆಯ ಶೈಲಾ ಧಾತಾರ, ಧಾರವಾಡದ ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಪಂ. ರಾಜಶೇಖರ ಮನ್ಸೂರ್ ಸಂಗೀತ ಪ್ರಸ್ತುತ ಪಡಿಸುವರು.ಮೂಲಸೌಲಭ್ಯ ಹಾಗೂ ವಾರ್ತಾ ಇಲಾಖೆ ಸಚಿವ ಸಂತೋಷ್ ಲಾಡ್ ಸಂಗೀತೋತ್ಸವಕ್ಕೆ ಚಾಲನೆ ನೀಡಲಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗೌರವ ಅತಿಥಿಗಳಾಗಿ ಹಾಗೂ ಅಧ್ಯಕ್ಷತೆಯನ್ನು ಶಾಸಕ ಅರವಿಂದ ಬೆಲ್ಲದ ವಹಿಸುವರು. ಮಾಜಿ ಸಿಎಂ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಸಿ.ಎಸ್. ಶಿವಳ್ಳಿ, ವಿನಯ ಕುಲಕರ್ಣಿ, ಅಬ್ಬಯ್ಯ ಪ್ರಸಾದ, ಎನ್.ಎಚ್. ಕೋನರಡ್ಡಿ, ವಿಪ ಸದಸ್ಯರಾದ ವೀರಣ್ಣ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ, ಜಿಪಂ ಅಧ್ಯಕ್ಷರಾದ ರತ್ನವ್ವ ಕಳ್ಳಿಮನಿ, ಜಿಪಂ ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ ಭಾಗವಹಿಸುವರು ಎಂದು ಡಾ. ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಬಿ.ಡಿ. ಹಿರೇಗೌಡರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement