ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿಜಯೀ ಕರ್ನಾಟಕ ಸಂಸ್ಥೆಯಿಂದ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಇಂದು

Vishwanath S
Updated On : 8 Sept 2013, 11:32 am

ಧಾರವಾಡ: ವಿಜಯೀ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಸಮೂಹವು ರಾಜ್ಯದ 13 ಜಿಲ್ಲೆಗಳ ಆಯ್ದ 75 ತಾಲೂಕುಗಳ 75 ಉತ್ತಮ ವಿಜ್ಞಾನ ಹಾಗೂ ಗಣಿತ ವಿಷಯದ ಶಿಕ್ಷಕರಿಗೆ ವಿಜಯೀ ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಸ್ಥ ಡಾ. ಬಾಬುರಾವ್ ಶೇಗುಣಸಿ, ರಾಯಚೂರು, ಬಿಜಾಪುರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ವೈದ್ಯಕೀಯ ಸಂಸ್ಥೆಗಳನ್ನು ಹೊಂದಿರುವ ನಮ್ಮ ಸಂಸ್ಥೆ ಸೆ. 8ರಂದು ಸೃಜನಾ ರಂಗಮಂದಿರದಲ್ಲಿ ಬೆಳಗ್ಗೆ 10ಕ್ಕೆ ಈ ಪುರಸ್ಕಾರ ಸಮಾರಂಭ ಹಮ್ಮಿಕೊಂಡಿದ್ದು, ಮೂಲ ಸೌಕರ್ಯ ಹಾಗೂ ವಾರ್ತಾ ಇಲಾಖೆ ಸಚಿವ ಸಂತೋಷ ಲಾಡ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಸಚಿವ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ವಿಶೇಷ ಆಹ್ವಾನಿತರಾಗಿ ಹನುಮಂತ ಕೊಟಬಾಗಿ, ಶೈಲಜಾ ಗಾಂವಕರ, ಶಿವಲೀಲಾ ಕುಲಕರ್ಣಿ ಭಾಗವಹಿಸುತ್ತಾರೆ. ವಿಜ್ಞಾನ ಹಾಗೂ ಗಣಿತ ಶಿಕ್ಷಕರನ್ನು ಆಯಾ ಜಿಲ್ಲೆಗಳ ಡಿಡಿಪಿಐ ಹಾಗೂ ಬಿಇಓಗಳ ಮೂಲಕ ಆಯ್ಕೆ ಮಾಡಿ ಅವರನ್ನು ಪ್ರೋತ್ಸಾಹಿಸಲು ಈ ಶಿಕ್ಷಕ ರತ್ನ ಪುರಸ್ಕಾರ ನೀಡಲಾಗುತ್ತಿದೆ ಎಂದ ಅವರು, ಧಾರವಾಡದಲ್ಲಿ ವಿಜಯೀ ಕರ್ನಾಟಕ ಪದವಿ ಪೂರ್ವ ವಿಜ್ಞಾನ ಕಾಲೇಜನ್ನು ಕಳೆದ ವರ್ಷ ಆರಂಭಿಸಿದ್ದು, ವಸತಿಯುತ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪ ಪ್ರಾಚಾರ್ಯ ಲಿಂಗರಾಜ ಪಾಟೀಲ, ಆಡಳಿತಾಧಿಕಾರಿ ವಿಷ್ಣು ಭೀ.ಜಿ. ಹಾಗೂ ರೇವಯ್ಯ ಹಿರೇಮಠ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement