ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗಣೋಶೋತ್ಸವ ಸಮಿತಿ, ಮಂಡಳಗಳಿಂದ ಪ್ರತಿಭಟನೆ

Rashmi Kasaragodu
Updated On : 9 Sept 2013, 12:23 pm

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 8
ಪ್ರಸಕ್ತ ವರ್ಷದ ಗಣೇಶೋತ್ಸವವನ್ನು ಹೆಚ್ಚು ಧ್ವನಿವರ್ಧಕ ಬಳಸದೇ ಹಾಗೂ ಮೆರವಣಿಗೆ ಇಲ್ಲದೇ ಮಾಡಬೇಕೆಂದು ಆದೇಶಿಸಿದ ಪೊಲೀಸ್ ಇಲಾಖೆ ಕ್ರಮ ಖಂಡಿಸಿ ಭಾನುವಾರ ಇಲ್ಲಿನ ಲೋಕಮಾನ್ಯ ಬಾಲಗಂಗಾದರ ಟಿಳಕ ಗಜಾನನೋತ್ಸವ ಸಮಿತಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ ಜಂಟಿಯಾಗಿ ತೀವ್ರ ರೀತಿಯ ಪ್ರತಿಭಟನೆ ನಡೆಸಿದವು.
ಕಲಾಭವನದಿಂದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದ ಸಮಿತಿ ಪದಾಧಿಕಾರಿಗಳು, ಕೂಡಲೇ ಪೊಲೀಸ್ ಆಯುಕ್ತರು ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.
ಎಚ್ಚರಿಕೆ: ಸಂಪ್ರದಾಯದಂತೆ ಗಣೇಶ ಹಬ್ಬವನ್ನು ಆಚರಿಸಲು ಮುಂದಾದ ಗಣೇಶೋತ್ಸವ ಮಂಡಳಿಗಳಿಗೆ ಹಾಗೂ ಧ್ವನಿವರ್ಧಕ ಹೊಂದಿದ ಮಾಲೀಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದು, ಒಂದು ಕೋಮಿನ ಜನರ ಭಾವನೆಗೆ ಧಕ್ಕೆ ತಂದಂತಾಗಿದೆ. ಒಂದು ವೇಳೆ ಪೊಲೀಸರ ಕಿರುಕುಳ ಹೀಗೆ ಮುಂದುವರಿದರೆ ನಗರದಲ್ಲಿ ಸಾರ್ವಜನಿಕ ಗಣಪತಿ ಮೂರ್ತಿಗಳೊಂದಿಗೆ ಕಲಾಭವನ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ.
ಆದ್ದರಿಂದ ಸರ್ವ ಜನಾಂಗದ ಪ್ರೀಯ ಗಣೇಶನನ್ನು ಶ್ರದ್ಧೆಯಿಂದ ಪೂಜಿಸಲು ಬಿಡಿ. ಎಲ್ಲ ಉತ್ಸವ ಹಾಗೂ ಹಬ್ಬಗಳಿಗೆ ಅವಕಾಶ ನೀಡಿ ಈಗ ಗಣೇಶೋತ್ಸವಕ್ಕೆ ಏಕೆ ತಡೆ ಒಡ್ಡುತ್ತಿರುವುದು ಗೊತ್ತಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವವನ್ನು ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮಿ, ಮೋಹನ ರಾಮದುರ್ಗ, ಮಂಜು ನಡಟ್ಟಿ, ಸುನೀಲ ಮೋರೆ, ಬಸವರಾಜ ಬೆಣ್ಣಿ, ಸಿದ್ದು ಕಲ್ಯಾಣಶೆಟ್ಟಿ, ಪ್ರಮೋದ ಕಾರಕುಣ, ಆನಂದ ಜಾಧವ, ಮನೋಜ ಕರ್ಜಗಿ, ಪ್ರಕಾಶ ಘಾಟಗೆ, ವಸಂತ ಅರ್ಕಾಚಾರಿ, ನಾಗರಾಜ ನಾಯಕ, ಸುನೀಲ ಸೊಂಡೂರ, ಸಂತೋಷ ಸವಣೂರ, ಯಲ್ಲಪ್ಪ ಮಾನೆ, ಸಂತೋಷ ಪೂಜಾರಿ, ಸುಭಾಷ ಶಿಂಧೆ, ಬಸವರಾಜ ಹೆಬ್ಬಳ್ಳಿ, ಮಂಜುನಾಥ ಶಿಂಧೆ, ಶಂಕರ ಶೇಳಕೆ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement