ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶರಣ ಹರಳಯ್ಯ ಪ್ರಶಸ್ತಿ ವಿತರಣೆ

Rashmi Kasaragodu
Updated On : 9 Sept 2013, 12:24 pm

ಧಾರವಾಡ: ಮಾರ್ಕಂಡೇಯ ದೊಡಮನಿ ಶಿಕ್ಷಣ ಸಮಿತಿ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಎಲ್ಐಸಿ ಬಳಿ ಇರುವ ಶಿಕ್ಷಕರ ಸರ್ಕಾರಿ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ಸೆ. 15ರಂದು ಸಂಜೆ 11ಕ್ಕೆ ಶರಣ ಹರಳಯ್ಯ ಪ್ರಶಸ್ತಿ ವಿತರಣೆ ಹಾಗೂ ಶರಣ ಹರಳಯ್ಯ ಪತ್ರಿಕೆಯ 20ನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಮನಸೂರಿನ ರೇವಣಸಿದ್ದೇಶ್ವರ ಬಸವರಾಜ ದೇವರು ಉದ್ಘಾಟಿಸುವರು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಪ್ರಶಸ್ತಿ ವಿತರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪತ್ರಿಕೆ ಬಿಡುಗಡೆಗೊಳಿಸುವರು. ಅತಿಥಿಗಳಾಗಿ ಶಿವಪ್ಪ ವಾಳದ, ಅಶೋಕ ದೊಡಮನಿ ಭಾಗವಹಿಸಲಿದ್ದು, ಮನೋಹರ ಮಂದೋಲ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement