ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ ವಕೀಲರ ಸಂಘಕ್ಕೆ ಇ ಗ್ರಂಥಾಲಯ ಸೌಲಭ್ಯ

Lingaraj Badiger
Updated On : 11 Sept 2013, 11:08 am

ಧಾರವಾಡ: ಇಲ್ಲಿನ ಧಾರವಾಡ ವಕೀಲರ ಸಂಘಕ್ಕೆ ಅಗತ್ಯವಿರುವ ಇ ಗ್ರಂಥಾಲಯ ಮತ್ತು ಸಂಘದ 2ನೇ ಹಂತದ ಕಟ್ಟಡದ ಕಾರ್ಯಗಳನ್ನು ಹಂತಹಂತವಾಗಿ ಕಾರ್ಯರೂಪಕ್ಕೆ ತರುವಲ್ಲಿ ಶ್ರಮವಹಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು. ನಗರದ ಧಾರವಾಡ ವಕೀಲರ ಸಂಘಕ್ಕೆ ಮಂಗಳವಾರ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎರಡು ವರ್ಷಗಳಿಂದ ಕಿರಿಯ ವಕೀಲರಿಗೆ ನೀಡಲಾಗುತ್ತಿರುವ ರು. 2 ಸಾವಿರ ಸಹಾಯಧನ ನೀಡದಿರುವ ಕುರಿತು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಿರ್ದೇಶನ ನೀಡುತ್ತೇನೆ ಎಂದರು. ನ್ಯಾಯಾಂಗದ ಘನತೆ ಕಾಪಾಡುವಲ್ಲಿ ವಕೀಲರ ಪಾತ್ರ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು ಎಂದರು.  ವಿ.ಡಿ. ಕಾಮರಡ್ಡಿ, ಉಪಾಧ್ಯಕ್ಷ ಆರ್.ಎಚ್. ಅಂಗಡಿ, ಸದಾನಂದ ಮುಂದಿನಮನಿ, ಗಜಾನನ ನಾಯಕ, ರಾಜು ಕೋಟಿ, ಕೆ.ಎಚ್. ಪಾಟೀಲ, ಆರ್.ವೈ. ಠಾಕೂರ, ಎಸ್.ಬಿ. ಅಮರಣ್ಣವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement