ಅಪರಿಚಿತ ಶವ ಪತ್ತೆ
ಧಾರವಾಡ: ಅಪರಿಚಿತ ಯುವತಿಯೋರ್ವಳ ಶವ ನುಗ್ಗಿಕೇರಿ ಕೆರೆಯಲ್ಲಿ ಬುಧವಾರ ಪತ್ತೆಯಾಗಿದೆ. 18 ವರ್ಷ ವಯಸ್ಸಿನ ಯುವತಿ 2 ದಿನಗಳ ಹಿಂದೆ ಕೆರೆಯಲ್ಲಿ ಬಿದ್ದು ಸಾವಿಗೀಡಾಗಿದ್ದಾಳೆ. ಬುಧವಾರ ಬೆಳಗ್ಗೆ ಶವ ಕೆರೆಯಲ್ಲಿ ಪತ್ತೆಯಾಗಿದೆ. ಕಂದು ಬಣ್ಣದ ಚೂಡಿದಾರ ಧರಿಸಿರುವ ಯುವತಿಯ ಕೈಯಲ್ಲಿ ಗಾಜಿನ ಬಳೆಗಳಿದ್ದು, ಸ್ವೇಟರ್ ಧರಿಸಿದ್ದಾಳೆ. ಮಾಹಿತಿ ಇದ್ದಲ್ಲಿ ಗ್ರಾಮೀಣ ಪೊಲೀಸ್ ಠಾಣೆ (0836-2233215) ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.