ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಪಾರಿತೋಷಕ ಪಟ್ಟಿ ಪ್ರಕಟ

Lingaraj Badiger
Updated On : 12 Sept 2013, 11:04 am

ಹುಬ್ಬಳ್ಳಿ: ಗಜಾನನ ಮಹಾಮಂಡಳ ವತಿಯಿಂದ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ನೀಡಲಾಗುವ ಪಾರಿತೋಷಕದ ಪಟ್ಟಿಯನ್ನು ಸೆ.12ರಂದು ಪ್ರಕಟಿಸಲಾಗುವುದು ಎಂದು ಗಜಾನನ ಮಹಾಮಂಡಳ ಅಧ್ಯಕ್ಷ ಡಿ. ಗೋವಿಂದರಾವ್ ಹೇಳಿದ್ದಾರೆ.
ಬುಧವಾರ ಬಾನಿ ಓಣಿಯ ಸಾರ್ವಜನಿಕ ಗಣೇಶ ಮಂಟಪದಲ್ಲಿ ಅತ್ಯುತ್ತಮ ಸಾರ್ವಜನಿಕ ಗಣೇಶ ಮಂಡಳಿ ಆಯ್ಕೆಗೆ ತೆರಳುವ ಸಂದರ್ಭ ಅವರು ಮಾತನಾಡಿದರು.
ಹುಬ್ಬಳ್ಳಿ ನಗರದ ಒಟ್ಟು 243 ಸಾರ್ವಜನಿಕ ಗಣೇಶ ಮಂಡಳಿಗಳಿಗೆ ತಂಡ ಭೇಟಿ ನೀಡಲಿದ್ದು, ಗಣೇಶ ವಿಗ್ರಹ, ವಿದ್ಯುತ್ ಅಲಂಕಾರ, ವೇದಿಕೆ ಅಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗಜಾನನ ಮಹಾಮಂಡಳದಿಂದ 60 ಪಾರಿತೋಷಕಗಳನ್ನು ನೀಡಲಾಗುವುದು ಎಂದರು.
ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ನಿರ್ಣಾಯಕರ ತಂಡಕ್ಕೆ ಚಾಲನೆ ನೀಡಿದರು. ನಿರ್ಣಾಯಕರ ತಂಡ ಎರಡು ದಿನಗಳವರೆಗೆ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿವಿಧ ಸಾರ್ವಜನಿಕ ಗಣೇಶ ಮಂಟಪಗಳಿಗೆ ಭೇಟಿ ನೀಡಲಿದೆ.
ನಿರ್ಣಾಯಕರ ತಂಡದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ ಜೆ.ಎಂ. ಸೋನಾವಣೆ, ಚಿತ್ರ ಕಲಾವಿದ ಎಂ.ಎನ್. ಕರಿಗಾರ, ಮತ್ತು ವೀರೇಶ ನೀಲನೂರ ಇನ್ನಿತರರು ಇದ್ದಾರೆ.
ಈ ಸಂದರ್ಭ ಸುಮತಿಶ್ರೀ ನವಲಿಹಿರೇಮಠ, ಸುಬ್ರಹ್ಮಣ್ಯ, ಶಿರಕೋಳ, ವಿಲಾಸರಾವ ಜಾಧವ, ರಾಜಣ್ಣ ಹಳ್ಳಿಕೇರಿ, ನಾರಾಯಣ ಶಿಂದೆ, ಪ್ರವೀಣ ಮೋದಿ, ವೀರೇಶ ರಟ್ಟಿಹಳ್ಳಿ, ಶಿವಾಜಿ ಶೆಟ್ಟರ ಇನ್ನಿತರರು ಇದ್ದರು.
--
ಏಕ ಪಾತ್ರಾಭಿನಯ: ಪ್ರಥಮ
ಕಲಘಟಗಿ: ಪಟ್ಟಣದ ಸೋಮಲಿಂಗೇಶ್ವರ ಸಾಂಸ್ಕೃತಿಕ ನಾಟ್ಯ ಸಂಘ ರಾಜ್ಯ ಮಟ್ಟದ ಏಕ ಪಾತ್ರಾಭಿನಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇತ್ತಿಚೆಗೆ ಬೆಂಗಳೂರಿನಲ್ಲಿ ಪದ್ಮಮುಖಿ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಕಲಾವಿದರಾದ ಬಸವರಾಜ ದೊಡ್ಡಮನಿ ಪ್ರಥಮ, ಮೌನೇಶ ಬಡಿಗೇರ ದ್ವಿತೀಯ ಸ್ಥಾನ ಪಡೆದಿದ್ದಾರೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement