ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಅಣ್ಣಿಗೇರಿ: ಸ್ಥಳೀಯ ನಿವಾಸಿಗಳಾದ ನಿಜಲಿಂಗಪ್ಪ, ನಾಗರತ್ನಾ ಅಕ್ಕಿ ದಂಪತಿ ಪುತ್ರಿಯಾದ ಶಾಂತಾ ನಿಜಲಿಂಗಪ್ಪ ಅಕ್ಕಿ ಅಂತರಾಷ್ಟ್ರೀಯ ಶೊಟೋಕಾನ್ ಕರಾಟೆ ಅಸೋಸಿಯೇಷನ್ ಆಯೋಜಿಸಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಧಾರವಾಡ ಜೆ.ಎಸ್.ಎಸ್ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾದ ಶಾಂತಾಳ ಯಶಸ್ಸಿಗೆ ಮಾರ್ಗದರ್ಶನ ನೀಡಿದ ರಮೇಶ ಸೊಲ್ಲಾಪುರ, ಕಾಲೇಜಿನ ಆಡಳಿತಾಧಿಕಾರಿಗಳಾದ ರಜನಿದಾಸ್, ಪ್ರಾಚಾರ್ಯ ಎಸ್.ಎಸ್. ಹೆಗಡೆ. ಕಾರ್ಯದರ್ಶಿ ಎನ್. ವಜ್ರಕುಮಾರ ಹಾಗೂ ಪಟ್ಟಣದ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.