ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಮಗಾರಿಗೆ ಸ್ಥಗಿತಕ್ಕೆ ಆಗ್ರಹಿಸಿ ಧರಣಿ

Lingaraj Badiger
Updated On : 12 Sept 2013, 11:04 am

ಹುಬ್ಬಳ್ಳಿ: ರಿಕ್ರಿಯೇಷನ್ ಕ್ಲಬ್ ನಿರ್ಮಾಣ ಕಾಮಗಾರಿಗೆ ಸ್ಥಗಿತಕ್ಕೆ ಆಗ್ರಹಿಸಿದ ಹು-ಧಾ ಕಮಿಷನರ್ ಅವರ ಕ್ರಮ ಖಂಡಿಸಿ ಗ್ರೌಂಡ್ ಬಚಾವೋ ಸಮಿತಿ ಪದಾಧಿಕಾರಿಗಳು ಬುಧವಾರ ಕಮಿಷನರ್ ಕಚೇರಿ ಎದುರು ಧರಣಿ ನಡೆಸಿದರು.
ಮಹಾನಗರ ಪಾಲಿಕೆ ಕಾಯ್ದೆ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಮಂಗಳವಾರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಆದರೂ ಪಾಲಿಕೆ ಕಮಿಷನರ್ ಈ ನಿಟ್ಟಿನಲ್ಲಿ ಕ್ರಮ ಜರುಗಿಸದೆ ಧೋರಣೆ ಖಂಡಿಸಿ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯಲ್ಲಿ ಗ್ರೌಂಡ್ ಬಚಾವೋ ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗಡೆ, ವೆಂಕಟೇಶ ಸವದತ್ತಿ, ಕಾಡಯ್ಯ ಹಿರೇಮಠ, ಅರವಿಂದ ಮೇಟಿ, ಅಮೃತ ಇಜಾರಿ, ಹೂವಪ್ಪ ದಾಯಗೊಂಡಿ, ಶೈಲೇಂದ್ರಕುಮಾರ ಪಾಟೀಲ, ಮನೋಜ ಹಾನಗಲ್, ವಿನಾಯಕ ಶಿರಾಳಕರ್, ನಾಡಗೇರ, ಬಸವರಾಜ ದೇವರಮನಿ, ಸಾಗರ ಗಾಯಕವಾಡ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement