ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಾಹಿತಿ ಹಕ್ಕು ಅನ್ಯಾಯ ವಿರುದ್ಧ ಮಂತ್ರದಂಡ

Lingaraj Badiger
Updated On : 12 Sept 2013, 10:55 am

ಧಾರವಾಡ: ಸಮಾಜದಲ್ಲಿನ ಅನ್ಯಾಯ ಹೋಗಲಾಡಿಸಲು ಮಾಹಿತಿ ಹಕ್ಕು ಕಾಯ್ದೆ ಮಂತ್ರದಂಡದಂತೆ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳು ಸೇರಿದಂತೆ ಜನಸೇವಕರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದ ಅಸ್ತ್ರ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಅಭಿಪ್ರಾಯಿಸಿದರು.
ಕವಿವಿ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಉಪನ್ಯಾಸಕ ಡಾ. ಸುರೇಶ ಹಿರೇಮಠ ಬರೆದ ಮಾಹಿತಿ ಹಕ್ಕು ಜಾಗೃತಿ ಅಭಿಯಾನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಜೆಗಳ ಪಾತ್ರ ಮುಖ್ಯ. ಸರ್ಕಾರದಲ್ಲಿನ ಹಲವು ಯೋಜನೆಗಳ ಪಾರದರ್ಶಕತೆ ತಿಳಿಯಲು ಈ ಮಾಹಿತಿ ಹಕ್ಕು ಕಾಯ್ದೆ ಅವಶ್ಯಕ.
ಅಧಿಕಾರಿಗಳನ್ನು ಸರಿಯಾದ ಕಾರ್ಯಕ್ಷಮತೆಯಿಂದ ಕೆಲಸ ಮಾಡಿಸಲು ಜನಸಾಮಾನ್ಯರಿಗೆ ಇದೊಂದು ಮಂತ್ರದಂಡವಾಗಿ ಪರಿಣಮಿಸಿದೆ ಎಂದರು. ಚಲನಚಿತ್ರ ನಟ, ಪರಿಸರವಾದಿ ಸುರೇಶ ಹೆಬ್ಳೀಕರ್, ಶ್ರಮಜೀವಿ ಸಮಾಜಕ್ಕೆ ಏನನ್ನಾದರೂ ಒಳ್ಳೆಯದನ್ನೆ ಮಾಡುತ್ತಾನೆ. ಹೆಚ್ಚು ಮಾಹಿತಿಯಿದ್ದರೆ ಹೆಚ್ಚು ಜ್ಞಾನ ದೊರಕುತ್ತದೆ. ಜಗತ್ತಿನಲ್ಲಿ ವಿವಿಧ ಮಾಹಿತಿಯನ್ನು ತಿಳಿಯಲು ಪುಸ್ತಕ ಅಗತ್ಯ. ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಯುವಕರಲ್ಲಿ ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಾಚಾರ್ಯ ಡಾ. ಎಸ್.ಎಸ್. ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಎ.ಎಸ್. ಬಾಲಸುಬ್ರಹ್ಮಣ್ಯ, ಭೂಮಿ ಸೇವಾ ಸಂಸ್ಥೆ ಶೈಕ್ಷಣಿಕ ಸಲಹೆಗಾರ ಪ್ರೊ. ಮಾಲತಿ ಹಿರೇಮಠ, ಡಾ. ಶಾಂತಾ ಇಮ್ರಾಪುರ, ಡಾ. ವಿ.ಎಲ್. ಪಾಟೀಲ, ಡಾ. ಡಿ.ಜಿ. ಹಾಜವಗೊಳ, ಪಿ.ಎಸ್. ಹಿರೇಮಠ, ಡಾ. ಕಾಂತೇಶ ಸಿದರಡ್ಡಿ, ಡಾ. ಶಿವಾನಂದ ಗಾಳಿ, ಡಾ. ಕ. ಅನ್ಬನ್, ಜಿ.ಆರ್. ಹಿರೇಮಠ, ಡಾ. ಜಿನದತ್ತ ಹಡಗಲಿ ಇದ್ದರು. ಡಾ. ಜೆ.ಎಂ. ನಾಗಯ್ಯ ಸ್ವಾಗತಿಸಿದರು. ಲೇಖಕ ಡಾ. ಸುರೇಶ ಹಿರೇಮಠ ವಂದಿಸಿದರು. ರಾಘವೇಂದ್ರ ಕುಪ್ಪೆಲೂರು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement