ವೃದ್ಧರಿಗೆ ಹೊದಿಕೆ ವಿತರಣೆ
ಹುಬ್ಬಳ್ಳಿ: ಭಾರತೀಯ ಜೀವ ವಿಮಾ ನಿಗಮದ 57ನೇ ವಾರ್ಷಿಕ ಸಪ್ತಾಹದ ಅಂಗವಾಗಿ ಹುಬ್ಬಳ್ಳಿಯ ಸಾಮಾಜಿಕ ಜಾಗೃತಿ ಆಶ್ರಯದಲ್ಲಿ ಮೈತ್ರಿ ಸೇವಾ ಸಂಸ್ಥೆಯ ವೃದ್ಧಾಶ್ರಮದ ವೃದ್ಧರಿಗೆ ಹೊದಿಕೆ, ಬೇಡ್ಶೀಟ್ ಮತ್ತು ಉಣ್ಣೆಟೋಪಿ ವಿತರಿಸಲಾಯಿತು. ಹುಬ್ಬಳ್ಳಿಯ ಭಾರತೀಯ ಜೀವ ವಿಮಾ ನಿಗಮದ ಮೂರನೇ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮೈತ್ರಿ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ 20 ವೃದ್ಧರಿಗೆ ಚಳಿಗಾಲದಲ್ಲಿ ಅನುಕೂಲವಾಗಲಿ ಎಂದು ಹೊದಿಕೆ, ಬೆಡ್ಶೀಟ್, ಟಾವೆಲ್, ಉಣ್ಣೆಟೋಪಿ ನೀಡಲಾಯಿತು. ಈ ಸಂದರ್ಭ ಶಾಖಾಧಿಕಾರಿ ಎಚ್. ಕಣ್ಣಿ, ಪ್ರಕಾಶ ನಾಯಕ, ಗೋವಿಂದ ಅಂಕೋಲೇಕರ್ ಮುಂತಾದವರು ಎಲ್ಐಸಿಯಿಂದ ವೃದ್ಧರಿಗೆ ಅತ್ಯಲ್ಪ ಕಾಣಿಕೆ ನೀಡಲಾಗಿದೆ. ಹಿರಿಯ ಜೀವಗಳ ಕುರಿತು ಇನ್ನೂ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಅವರು ಬದುಕಿನಲ್ಲೂ ಸ್ವಲ್ಪ ಮಟ್ಟಿಗಿನ ನೆಮ್ಮದಿ ಕಾಣಬಹುದು ಎಂದರು. ಉಪಶಾಖಾಧಿಕಾರಿ ಅರವಿಂದ, ವೈ. ವಿಶ್ವನಾಥ, ಅಭಿವೃದ್ಧಿ ಅಧಿಕಾರಿಗಳಾದ ಎಂ.ಆರ್. ಭಂಡಾರಿ, ಕೆ.ಟಿ. ಮುರುಗೇಂದ್ರಪ್ಪ ಮತ್ತು ಎನ್.ವೈ. ಬೆಟಗೇರಿ ಇದ್ದರು.
--