ಸದ್ಯದಲ್ಲೇ ಅಣ್ಣಿಗೇರಿಗೆ ನಾಲ್ಕು ಬಸ್
ಅಣ್ಣಿಗೇರಿ: ಪಟ್ಟಣದ ಪ್ರಯಾಣಿಕರಿಗೆ ನಾಲ್ಕು ಸುವರ್ಣ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದ್ದನ್ನು ಸಾರಿಗೆ ಇಲಾಖೆ ಪರಿಗಣಿಸಿ, ವಾಹನ, ಸಿಬ್ಬಂದಿಯನ್ನು ಪೂರೈಸುವಲ್ಲಿ ಕ್ರಮಕೈಗೊಳ್ಳುವಂತೆ ಚರ್ಚಿಸಿದ್ದು, ಸದ್ಯದಲ್ಲಿಯೇ ಹುಬ್ಬಳ್ಳಿಯಿಂದ ಅಣ್ಣಿಗೇರಿಗೆ ಬಸ್ ಸೌಲಭ್ಯ ಒದಗಿಸಲು ವ್ಯವಸ್ಥೆ ಕಲ್ಪಿಸುವುದಾಗಿ ಹುಬ್ಬಳ್ಳಿ ವಿಭಾಗದ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಈರಣ್ಣಾ ಗುರಿಕಾರ ಸುವರ್ಣ ಬಸ್ ಸೌಲಭ್ಯ ಕಲ್ಪಿಸದಿದ್ದಲ್ಲಿ ರಾಸ್ತಾರೋಖೋ ಮಾಡುವುದಾಗಿ ಎಚ್ಚರಿಸಿ ಇಲಾಖೆಗೆ ಮನವಿ ಸಲ್ಲಿಸಿದ್ದರು.