ಉತ್ತಮ ಗಣೇಶ ಮೂರ್ತಿಗೆ ಪ್ರಶಸ್ತಿ
ಹುಬ್ಬಳ್ಳಿ: ನಗರದ ಅತ್ಯುತ್ತಮ ಗಣೇಶ ಮೂರ್ತಿಗಳಿಗೆ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಸೆ. 13ರಂದು ಬಹುಮಾನ ವಿತರಿಸಲಾಗುತ್ತಿದೆ.
ಅಂದು ಬೆಳಗ್ಗೆ 11ಕ್ಕೆ ಮೂರುಸಾವಿರ ಮಠದಲ್ಲಿ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಬಹುಮಾನ ವಿಜೇತ ಸಮಿತಿ ಪದಾಧಿಕಾರಿಗಳು ಕಡ್ಡಾಯವಾಗಿ ಪರಿಚಯ ಪತ್ರ ತರುವಂತೆ ಸೂಚಿಸಲಾಗಿದೆ.
ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಿಎಂ ಹಾಗೂ ಶಾಸಕ ಜಗದೀಶ ಶೆಟ್ಟರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಪ್ರಸಾದ ಅಬ್ಬಯ್ಯ, ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ, ಮಾಜಿ ಸಂಸದ ಐ.ಜಿ. ಸನದಿ, ಸಾಹಿತಿ ಆರೂರು ಲಕ್ಷ್ಮಣ ಶೇಟ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಾಗೂ ಪ್ರತಿಭಾನ್ವಿತರಾದ ಅಶ್ವಿನಿ ಅಂಗಡಿ, ಜ್ಯೋತಿರಾಜ (ಕೋತಿರಾಜ), ವಸಂತ ಹಳದಿಪೂರ, ನಾನು ಪಾಟೀಲ ಮತ್ತಿತರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.