ಗಣೇಶ ವಿಗ್ರಹಗಳ ವೀಕ್ಷಣೆ ನಿಯೋಗಕ್ಕೆ ಚಾಲನೆ
ಹುಬ್ಬಳ್ಳಿ: ದೈನಂದಿನ ಚಟುವಟಿಕೆಯಲ್ಲಿ ಮನುಷ್ಯ ತನ್ನನ್ನು ತಾನು ಮರೆಯುತ್ತಿದ್ದಾನೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಬಹುಮಾನ ನಿರ್ಣಾಯಕ ಸಮಿತಿ ವತಿಯಿಂದ ಆಯೋಜಿಸಿದ್ದ ಹುಬ್ಬಳ್ಳಿಯ ಶ್ರೀ ಗಣೇಶ ವಿಗ್ರಹಗಳ ವೀಕ್ಷಣೆಯ ನಿಯೋಗಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯ ತನ್ನ ಜೀವನದಲ್ಲಿ ಧ್ಯಾನ, ಸಾಹಿತ್ಯ, ಕಲೆ ಚಟುವಟಿಕೆಗಳನ್ನು ಅಳವಡಿಸಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದು ಸಲಹೆ ನೀಡಿದರು. ಮಹಾಮಂಡಳದ ಅಧ್ಯಕ್ಷ ಶ್ರೀಶೈಲಪ್ಪ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಬಹುಮಾನ ನಿರ್ಣಾಯಕ ಸಮಿತಿಯ ಸಾಯಿನಾಥ ಹಿತ್ತಾಳಿ, ರಾಘವೇಂದ್ರ ಮುರಗೋಡ, ಈರಣ್ಣ ಪಾಳೀದ, ಶಾಂತರಾಜ ಪೋಳ, ಎಸ್.ಎಸ್. ಕಮಡೊಳ್ಳಿಶೆಟ್ರ, ಚನ್ನಬಸಪ್ಪ ಧಾರವಾಡಶೆಟ್ರ ಮತ್ತಿತರರಿದ್ದರು.
--