ನಾಳೆ ಸಾಹಿತಿ ದಂಪತಿ ದತ್ತಿ ಪ್ರಶಸ್ತಿ ಪ್ರದಾನ
ಧಾರವಾಡ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡುವ ಡಾ. ವೃಷಭೇಂದ್ರಸ್ವಾಮಿ ಮತ್ತು ಪ್ರೊ. ಲಲಿತಾಂಬ ದತ್ತಿಯ ಪ್ರಸ್ತುತ ವರ್ಷದ ಸಾಹಿತಿ ದಂಪತಿ ಪ್ರಶಸ್ತಿಯನ್ನು ಮೈಸೂರಿನ ಸಾಹಿತಿ ದಂಪತಿಗಳಾದ ಡಾ. ಶುಭಚಂದ್ರ ಮತ್ತು ಡಾ. ಪ್ರೀತಿ ಅವರಿಗೆ ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸೆ. 14ರ ಸಂಜೆ 5ಕ್ಕೆ ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಹಿತಿಗಳಾದ ಡಾ. ಯಶೋದಾ ಭಟ್ ಅಧ್ಯಕ್ಷತೆ ವಹಿಸಲಿದ್ದು, ಅಭಿನಂದನಾ ಭಾಷಣವನ್ನು ಧಾರವಾಡದ ಜೆಎಸ್ಸೆಸ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ