ಸಂತ್ರಸ್ತರ ನಿಧಿಗೆ ರು. 25 ಸಾವಿರ ಸಲ್ಲಿಕೆ
ಧಾರವಾಡ: ಶ್ರೀ ಬಾಲಗಂಗಾಧರ ತಿಲಕ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ವತಿಯಿಂದ ಉತ್ತರಾಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಿಲುಕಿದ ಸಂತ್ರಸ್ತರ ನಿಧಿಗೆ ಅಪರ ಜಿಲ್ಲಾಧಿಕಾರಿಗಳ ಮೂಲಕ ರು. 25 ಸಾವಿರ ಪರಿಹಾರ ಮೊತ್ತದ ಚೆಕ್‌ನ್ನು ಗುರುವಾರ ವಿತರಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ನಗರದ ಸಾರ್ವಜನಿಕ ಗಜಾನನೋತ್ಸವ ಮಂಡಳಿಗಳಿಗೆ ಶ್ರೀ ಬಾಲಗಂಗಾಧರ ತಿಲಕ ಸಾರ್ವಜನಿಕ ಗಜಾನನೋತ್ಸವ ಸಮಿತಿಯು ಮಣ್ಣಿನ ಗಣೇಶನಿಗೆ ಬಹುಮಾನ ರೂಪದಲ್ಲಿ ಪ್ರೋತ್ಸಾಹಿಸುತ್ತಾ ಬಂದಿತ್ತು. ಆದರೆ, ಈ ವರ್ಷ ಪ್ರಶಸ್ತಿ ವಿತರಣೆಯನ್ನು ಉತ್ತರಾಖಂಡದಲ್ಲಿ ಜರುಗಿದ ಪ್ರಕೃತಿ ವಿಕೋಪಕ್ಕೆ ಸಿಕ್ಕು ಅಪಾರ ಹಾನಿಯಾದ ಬಗ್ಗೆ ಸಮಿತಿಯು ವಿಷಾದ ವ್ಯಕ್ತಪಡಿಸುತ್ತ ಈ ವರ್ಷ ಗಜಾನೋತ್ಸವ ಮಂಡಳಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕೈಬಿಟ್ಟು ಬಹುಮಾನ ವಿತರಣೆ ಮಾಡುವಂಥ ಖರ್ಚಿನ ಮೊತ್ತವನ್ನೆ ಸಂತ್ರಸ್ತರ ನಿಧಿಗೆ ಪರಿಹಾರನಿಧಿ ರೂಪದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ನೀಡಲಾಯಿತು. ಪಾಲಿಕೆ ಸದಸ್ಯ ದೀಪಕ ಚಿಂಚೂರೆ, ಸಂಜಯ ಕಪಟಕರ, ಬಸವರಾಜ ಮುತ್ತಳ್ಳಿ, ವಿಜಯಾನಂದಶೆಟ್ಟಿ, ಈರೇಶ ಅಂಚಟಗೇರಿ, ಸುರೇಶ ಬೆದರೆ, ಮೋಹನ ರಾಮದುರ್ಗ, ಬಸವರಾಜ ಬೆಣ್ಣಿ, ಸುನೀಲ ಮೊರೆ, ರಾಕೇಶ ದೊಡಮನಿ, ನಾಗರಾಜ ನಾಯಕ, ಗಂಗಾಧರ ಕುಲಕರ್ಣಿ, ಮಲ್ಲನಗೌಡ ಪಾಟೀಲ ಇದ್ದರು.