ಸರ್ಕಾರಿ ಆಸ್ಪತ್ರೆಗೆ ರು. 4.50 ಕೋಟಿ ಮಂಜೂರು: ಶಿವಳ್ಳಿ
ಕುಂದಗೋಳ: ನೂರು ಹಾಸಿಗೆಗಳ ಆಸ್ಪತ್ರೆಗೆ ರು. 4.50 ಕೋಟಿ ಮಂಜೂರಾಗಿದ್ದು, ಗುತ್ತಿಗೆದಾರರು ಉತ್ತಮವಾಗಿ ಕಾಮಗಾರಿ ಮಾಡಬೇಕು ಎಂದು ಶಾಸಕ ಸಿ.ಎಸ್. ಶಿವಳ್ಳಿ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಬಡರೋಗಿಗಳಿಗೆ ಶುದ್ಧ ವಾತಾವರಣ ಕಲ್ಪಿಸಲು ಕಾಮಗಾರಿ ಆರಂಭಿಸಲಾಗಿದ್ದು, ಇದರೊಟ್ಟಿಗೆ ಬಡವರಿಗಾಗಿ ಮುಂಬರುವ ದಿನಗಳಲ್ಲಿ ಸರ್ಕಾರ ಔಷಧಿ ಭಾಗ್ಯ ಯೋಜನೆ ಜಾರಿಗೆ ತರುವ ನಿರೀಕ್ಷೆ ಇದೆ ಎಂದರು.
ಜಿಪಂ ಸದಸ್ಯ ವೆಂಕನಗೌಡ ದ್ಯಾ. ಹಿರೇಗೌಡ್ರ, ತಾಪಂ ಅಧ್ಯಕ್ಷೆ ಅಂಬವ್ವ ಪಾಟೀಲ, ಪಪಂ ಸದಸ್ಯರಾದ ರಜಿಯಾ ಬೇಗಂ ಹಸುಬಾಯಿ, ದ್ಯಾಮಮ್ಮ ಬೀಡನಾಳ, ಅಜೀಜ್ ಕ್ಯಾಲಕೊಂಡ, ಬಸವರಾಜ ವಟವಟಿ, ಮಾಬೂಬಲಿ ನದಾಫ್, ಬಸವರಾಜ ದೊಡ್ಡಮನಿ, ವಿಠ್ಠಲ ಚೌಹಾಣ್, ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಜಿ. ಬಬ್ರುವಾಡ, ತಹಸೀಲ್ದಾರ್ ಎಚ್.ಎಂ. ಓಲೇಕಾರ, ಸಿಪಿಐ ಜಿ.ಜಿ. ಮರಿಬಾಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಎಂ.ಆರ್. ನೂಲ್ವಿ ಹಾಗೂ ಅನೇಕರು ಪಾಲ್ಗೊಂಡಿದ್ದರು.
ಎಸ್.ಕೆ. ಕುಲಕರ್ಣಿ ಪ್ರಾರ್ಥಿಸಿದರು. ಎಂ.ಎಸ್. ಲಿಂಗಶೆಟ್ರ ನಿರೂಪಿಸಿದರು.
--