ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪತ್ರಕರ್ತರು ವೃತ್ತಿನಿಷ್ಠೆ ಕಾಯ್ದುಕೊಳ್ಳಲಿ: ಸಿದ್ದಾರ್ಥ

Vishwanath S
Updated On : 14 Sept 2013, 11:53 am

ಧಾರವಾಡ: ಕಾಸಿಗಾಗಿ ಸುದ್ದಿಯಿಂದಾಗಿ ಜನರು ಪತ್ರಿಕೆಗಳ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಾಧ್ಯಮಗಳು ಈ ವಿಷಯದಲ್ಲಿ ಜಾಗರೂಕವಾಗಿರಬೇಕು ಎಂದು ಪತ್ರಕರ್ತ ಸಿದ್ದಾರ್ಥ ವರದರಾಜನ್ ಹೇಳಿದರು.
ಕರ್ನಾಟಕ ವಿವಿಯಲ್ಲಿ ಶಿಕ್ಷಕ ದಿನಾಚರಣೆ ನಿಮಿತ್ತ ಡಾ. ಎಸ್. ರಾಧಾಕೃಷ್ಣನ್ ಸ್ಮಾರಕ ಉಪನ್ಯಾಸದಲ್ಲಿ ಪ್ರಸ್ತುತ ಭಾರತದಲ್ಲಿ ಮಾಧ್ಯಮದ ಪಾತ್ರ ವಿಷಯವಾಗಿ ಮಾತನಾಡಿದ ಅವರು, ಪಶ್ಚಿಮದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಬೆಳವಣಿಗೆ ಸರ್ವಕಾಲಿಕ ಉತ್ತುಂಗದಲ್ಲಿದೆ. ಪತ್ರಿಕೆಗಳನ್ನು 124 ಮಿಲಿಯನ್ ಜನ ಓದುತ್ತಿದ್ದು ಶೇ. 6.5 ರಷ್ಟು ಪ್ರಗತಿ ಸಾಧಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ವೃತ್ತಿನಿಷ್ಠೆ ಕಾಯ್ದುಕೊಂಡು ಜನತೆ, ಸಮಾಜದ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಕುಲಪತಿ ಡಾ. ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಚಂದ್ರಮಾ ಕಣಗಲಿ, ಡಾ. ಕೆ.ಆರ್. ದುರ್ಗಾದಾಸ್ ಇದ್ದರು. ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಡಾ. ಎ.ಎಸ್. ಬಾಲಸುಬ್ರಮಣ್ಯ, ಡಾ. ಎಂ. ಗಂಗಾಧರಪ್ಪ ಇದ್ದರು. ರಾಜ್ಯಶಾಸ್ತ್ರ ವಿಭಾಗದ ಡಾ. ಹರೀಶ ರಾಮಸ್ವಾಮಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement