ಮನುಷ್ಯ ಮಾನವೀಯತೆ ಮೆರೆಯಲಿ
ಧಾರವಾಡ: ಜಾತಿ, ಮತ, ಪಂಥ ಮತ್ತು ಧರ್ಮಗಳನ್ನು ಸರಿಸಿ ಮಾನವೀಯತೆ ಮೆರೆಯುವುದು ನಾಗರಿಕ ಸಮಾಜದಲ್ಲಿ ಅವಶ್ಯವಾಗಿದೆ ಎಂದು ಸಾಹಿತಿ ಬಿ.ಟಿ. ಲಲಿತಾ ನಾಯಕ ಹೇಳಿದರು.
ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ ಮತ್ತು ಪ್ರೊ. ಲಲಿತಾಂಬ ಸಾಹಿತಿ ದಂಪತಿ ದತ್ತಿ ಪ್ರಶಸ್ತಿ ಪ್ರದಾನದಲ್ಲಿ ಸಮಾರಂಭದಲ್ಲಿ ಮಾತನಾಡಿದರು. ಗಂಡ ಸತ್ತರೆ ಹೆಂಡತಿಗೆ ವಿಧವೆ ಪಟ್ಟ ಹೇರುವುದು ಸಮಾಜಕ್ಕೆ ಶೋಭಿಸುವಂತದ್ದಲ್ಲ. ವಿಧವಾ ವಿವಾಹವನ್ನು ಸಮಾಜ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ದಾಂಪತ್ಯವೆನ್ನುವುದು ಮನುಷ್ಯನ ಜೀವನದ ಉತ್ಕೃಷ್ಟ ಸಂಸ್ಕಾರವಾಗಿದ್ದು, ಹೆಣ್ಣು ಗಂಡಿನ ಸಂಬಂಧ ಲೌಕಿಕವನ್ನು ಮೀರಿ ಪಾರಮಾರ್ಥಿಕವಾಗಿ ಬೆಳೆಯುವಂತದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಪ್ರೀತಿ ಮತ್ತು ಪ್ರೊ. ಶುಭಚಂದ್ರ ದಂಪತಿಗಳನ್ನು ಸನ್ಮಾನಿಸಲಾಯಿತು. ಡಾ. ಜಿನದತ್ತ ಹಡಗಲಿ ಮಾತನಾಡಿದರು. ಡಾ. ಯಶೋಧಾ ಭಟ್ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ, ಡಾ. ಎನ್.ಪಿ. ಭಟ್, ಡಾ. ಶಾಂತಿನಾಥ ದಿಬ್ಬದ, ವಿಶ್ವನಾಥ ಚೌಶೆಟ್ಟಿ, ಡಾ. ಶಿವಾನಂದ ಗಾಳಿ, ಮತ್ತಿತರರು ಇದ್ದರು.
ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಡಾ. ವೈ.ಎಂ. ಭಜಂತ್ರಿ ನಿರೂಪಿಸಿದರು. ಚನ್ನಪ್ಪ ಅಂಗಡಿ ವಂದಿಸಿದರು.
--