ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದಿನಿಂದ ಕುಷ್ಠರೋಗ ತಪಾಸಣೆ, ಚಿಕಿತ್ಸೆ ತಿಳಿವಳಿಕೆ

Lingaraj Badiger
Updated On : 17 Sept 2013, 11:48 am

ಕುಂದಗೋಳ: ತಾಲೂಕಿನಲ್ಲಿರುವ ಎಲ್ಲ ಗ್ರಾಮಗಳಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ತಾಲೂಕಿನ ಪ್ರತಿಮನೆಗೆ ಭೇಟಿ ನೀಡಿ ಕುಷ್ಠರೋಗದ ತಪಾಸಣೆ ಹಾಗೂ ಚಿಕಿತ್ಸೆ ಕುರಿತು ತಿಳಿವಳಿಕೆ ಬಗ್ಗೆ ಸೆ. 17ರಿಂದ ಸೆ.24ರ ವರೆಗೆ ಸ್ಪೇಷಲ್ ಆಕ್ಟಿವಿಟಿ ಪ್ಲಾನ್ ನಡೆಯಲಿದೆ. ತಾಲೂಕಿನಾದ್ಯಾಂತ ಒಟ್ಟು 75 ತಂಡ ರಚಿಸಲಾಗಿದ್ದು, ಇದರಲ್ಲಿ 58 ಕಿರಿಯ ಆರೋಗ್ಯ ಸಹಾಯಕರು, 116 ಆಶಾ ಕಾರ್ಯಕರ್ತೆಯರು, 6 ಜನ ಆರೋಗ್ಯಾಧಿಕಾರಿಗಳು, 7 ಜನ ಮೇಲ್ವಿಚಾರಕರನ್ನು ಆಯೋಜಿಸಲಾಗಿದೆ. ತಿಳಿಬಿಳಿ ಗುಲಾಬಿ ಬಣ್ಣದ ಕಲೆಗಳು ತಮ್ಮ ದೇಹದಲ್ಲಿ ಕಂಡುಬಂದು, ಅವುಗಳಿಗೆ ಸ್ಪರ್ಶಜ್ಞಾನವಿಲ್ಲದಿದ್ದಲ್ಲಿ ಈ ಮೇಲಿನ ತಂಡ ಭೇಟಿ ನೀಡಿದಾಗ ಪರೀಕ್ಷಿಸಿಕೊಳ್ಳಬೇಕು. ಡಾ. ಎ.ಎಸ್.ವಿ. ಗರಗ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳು ಇವರು ಕುಷ್ಠರೋಗವೆಂದು ಖಚಿತವಾದಲ್ಲಿ ಅಂಥವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಗಾಸನ: ಚಿನ್ನದ ಪದಕ
ಹುಬ್ಬಳ್ಳಿ: ಇತ್ತೀಚೆಗೆ ಓರಿಸ್ಸಾದ ಪುರಿಯಲ್ಲಿ  ಜರುಗಿದ 10ನೇ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿ ಬೈಲಬಸಪ್ಪ ಕಬ್ಬೆರಹಳ್ಳಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. 19 ವರ್ಷದೊಳಗಿನವರ ರಾಷ್ಟ್ರಮಟ್ಟದ ಅಥ್ಲೆಟಿಕ್ ಯೋಗಾಸನ ಸ್ಪರ್ಧೆಯಲ್ಲಿ ದೇಶದ 14 ರಾಜ್ಯಗಳಿಂದ ಆಗಮಿಸಿದ್ದ ಸುಮಾರು 1500ಕ್ಕೂ ಹೆಚ್ಚು ಯೋಗಪಟುಗಳಿಗೆ ಸ್ಪರ್ಧೆ ನೀಡಿದ ಬೈಲಬಸಪ್ಪ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಕೆಎಲ್‌ಇ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರಾದ ಡಾ. ವಿ.ಎಸ್. ಸಾಧುನವರ, ಶಂಕರಣ್ಣ ಮುನವಳ್ಳಿ ಸೇರಿದಂತೆ ಇನ್ನಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಚಾರಣಾಧೀನ ಕೈದಿ ಸಾವು
ಹುಬ್ಬಳ್ಳಿ: ಕಾಯಿಲೆಯಿಂದ ಬಳಲುತ್ತಿದ್ದ ವಿಚಾರಣಾಧೀನ ಕೈದಿಯೊಬ್ಬನು ಸೋಮವಾರ ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಶಿವಾನಂದ ಕಮ್ಮಾರ ವಿಚಾರಣಾ ಕೈದಿಯಾಗಿ ಹುಬ್ಬಳ್ಳಿ ಉಪಕಾರಾಗೃಹದಲ್ಲಿದ್ದನು. ಭಾನುವಾರ ಕೈದಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಎಂದು ಕಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಈ ಕುರಿತು ಉಪಕಾರಾಗೃಹದ ಜೈಲರ್ ಕರಣ್ ಕ್ಷತ್ರಿ ನೀಡಿರುವ ವರದಿ ಮೇರೆಗೆ ಅಸ್ವಾಭಾವಿಕ ಸಾವು ಎಂದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಆಕಸ್ಮಿಕ ಬೆಂಕಿ: ಮಹಿಳೆ ಸಾವು
ನವಲಗುಂದ: ತಾಲೂಕಿನ ಆರೆಕುರಹಟ್ಟಿ ಗ್ರಾಮದ ವಿವಾಹಿತ ಮಹಿಳೆ ಕಲ್ಲವ್ವಾ ಫಕ್ಕೀರಪ್ಪ ಕಂಬಳಿ (32) ಎಂಬುವವರು ಮನೆಯಲ್ಲಿದ್ದಾಗ ಆಕಸ್ಮಿಕ ಬೆಂಕಿ ತಗುಲಿ ತೀವ್ರ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ಕಳುಹಿಸಿಕೊಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಲ್ಲವ್ವ ಸೋಮವಾರ ಮೃತಪಟ್ಟಿದ್ದಾಳೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement