ಶಾಂತಿ ಸದನ ಪ್ರಾಥಮಿಕ ಶಾಲೆಗೆ ಸಮಗ್ರ ವೀರಾಗ್ರಣಿ
ಧಾರವಾಡ: ಕವಿವಿ ರಾಣಿಚನ್ನಮ್ಮ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಪ್ರಾಥಮಿಕ ಶಾಲೆ ವಿಭಾಗದ ಕ್ರೀಡಾಕೂಟದಲ್ಲಿ ಇಲ್ಲಿನ ಶಾಂತಿಸದನ ಪ್ರಾಥಮಿಕ ಶಾಲೆ ಶಹರದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ.
ಬಾಲಕಿಯರ ವಿಭಾಗದಲ್ಲಿ ಶಾಲೆ ವಿದ್ಯಾರ್ಥಿಗಳು ಶಟಲ್ ಬ್ಯಾಡ್‌ಮಿಂಟನ್ ಪ್ರಥಮ, ಬಾಸ್ಕೆಟ್ ಬಾಲ್ ದ್ವಿತೀಯ, ಟೇಬಲ್ ಟೆನಿಸ್ ದ್ವಿತೀಯ ಸ್ಥಾನ ಪಡೆದರು. ಬಾಲಕರ ವಿಭಾಗದ ಶೆಟಲ್ ಬ್ಯಾಡ್‌ಮಿಂಟನ್ ದ್ವಿತೀಯ, ಟೇಬಲ್ ಟೆನಿಸ್ ದ್ವಿತೀಯ, ಹ್ಯಾಂಡ್‌ಬಾಲ್ ದ್ವಿತೀಯ, ಬಾಸ್ಕೆಟ್ ಬಾಲ್ ದ್ವಿತೀಯ ಸ್ಥಾನ ಗಳಿಸಿತು.
ವೈಯಕ್ತಿಕ ಆಟದಲ್ಲಿ ಅಶಿತಾ ಬಿ. ಚೆಸ್, ಮನಿಶ ಎನ್. ಎತ್ತರ ಜಿಗಿತಗಳಲ್ಲಿ ಪ್ರಥಮ ಸ್ಥಾನ. ಕರಾಟೆಯಲ್ಲಿ ಋಷಬ್ ಯಲಿಗಾರ, ನಿನಾದ ಯಲಿಗಾರ, ರೋಹನ್‌ಕುಮಾರ ಪ್ರಥಮ ಸ್ಥಾನ. ಕ್ರಿಕೆಟ್‌ನಲ್ಲಿ ಅನಿರುದ್ಧ ಕುಲಕರ್ಣಿ ವಿಭಾಗ ಮಟ್ಟದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಮಗ್ರ ವಿರಾಗ್ರಣಿ ಪ್ರಶಸ್ತಿ ಪಡೆದ ಕ್ರೀಡಾಪಟುಗಳಿಗೆ ಶಾಲೆ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯ ಸಿಸ್ಟರ್ ಜೋಸ್ಲೀನ್ ಮಸ್ಕರಿನ್ಹಾಸ್, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಪಟ್ಟಣದವರ ಅಭಿನಂದಿಸಿದ್ದಾರೆ.
--
ನೇತ್ರ ತಪಾಸಣೆ ಶಿಬಿರ ಶ್ಲಾಘನೀಯ: ಎಂ.ವೈ. ರವಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 16
ಇಲ್ಲಿನ ಉಣಕಲ್ ಕುರುಬರ ಓಣಿಯ ಶ್ರೀ ಯುವಶಕ್ತಿ ತರುಣ ಮಂಡಳ ಮತ್ತು ದಿವ್ಯಜ್ಯೋತಿ ಕಣ್ಣಿನ ಅಸ್ಪತ್ರೆ ಆಶ್ರಯದಲ್ಲಿ ಗಣೇಶ ಚತುರ್ಥಿ ನಿಮಿತ್ತ ನೇತ್ರ ಉಚಿತ ಚಿಕಿತ್ಸಾ ತಪಾಸಣಾ ಶಿಬಿರ ಜರುಗಿತು. ವಿದ್ಯಾನಗರ ಪೊಲೀಸ್ ಠಾಣೆ ಪಿಎಸ್‌ಐ ಎಂ.ವೈ. ರವಿ ಅವರು ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ಯುವಕ ಮಂಡಳದಿಂದ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು. 120 ಜನರ ಕಣ್ಣು ತಪಾಸಣೆ ಮಾಡಿ ಔಷಧಿ ವಿತರಿಸಲಾಯಿತು. ರಾಮನಗೌಡರ ಪೊಲೀಸ್‌ಗೌಡರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ ಎ.ಎಂ. ಹೆಗ್ಡೆ, ಪ್ರಭಾಕರ ಯಲ್ಲಪ್ಪ ಪಾರಣ್ಣವರ ಇನ್ನಿತರರು ಇದ್ದರು.
--