ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

9ನೇ ದಿನದ ಗಣೇಶ ವಿಸರ್ಜನೆ...

Lingaraj Badiger
Updated On : 18 Sept 2013, 11:27 am

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ವಿವಿಧೆಡೆ 9 ದಿನಗಳವರೆಗೆ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಂಗಳವಾರ ಸಂಜೆ ನಡೆಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ವಿದ್ಯುತ್ ದೀಪ ಹಾಗೂ ತಳಿರು-ತೋರಣಗಳಿಂದ ಅಲಂಕಾರ ಮಾಡಿದ್ದ ವಾಹನಗಳಲ್ಲಿ ಗಣೇಶ ಮೂರ್ತಿಯನ್ನಿಟ್ಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು.
ಮೆರವಣಿಗೆಯಲ್ಲಿ ಕೇಸರಿ ರುಮಾಲು ಧರಿಸಿ ಪಾಲ್ಗೊಂಡಿದ್ದ ಯುವಕರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಮಹಿಳೆಯರು ಗಣೇಶ ಮೂರ್ತಿಗಳಿಗೆ ಆರತಿ ಬೆಳಗಿದರು. ಯುವಕರು ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿದರು. ಬ್ಯಾಂಡ್, ಝಾಂಜ್, ಭಜನೆಯೊಂದಿಗೆ ಧ್ವನಿವರ್ಧಕಗಳಲ್ಲಿ ಕೇಳಿಬರುತ್ತಿದ್ದ ಹಾಡುಗಳು ಮೆರವಣಿಗೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದವು. ಮೆರವಣಿಗೆ ಹಳೇ ಹುಬ್ಬಳ್ಳಿ ದುರ್ಗದಬೈಲ್ದಿಂದ ಪ್ರಾರಂಭಗೊಂಡು ಚನ್ನಪೇಟ, ಅರವಿಂದ ನಗರ, ಕಾರವಾರ ರಸ್ತೆ ಮೂಲಕ ಶ್ರೀನಗರದ ಕಪಿಲಾ ಬಾವಿ ತಲುಪಿ, ಬಾವಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಸನ್ಮಾನ: ಇದಕ್ಕೂ ಮೊದಲು ಹಳೇ ಹುಬ್ಬಳ್ಳಿ ದುರ್ಗದಬೈಲ್ನಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ, ಲಕ್ಷಣ ಕಲಾಲ, ಡಾ. ಮಹೇಶ ನಾಲವಾಡ ಚಾಲನೆ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹವ್ಯಾಸಿ ರಂಗಭೂಮಿ ಕಲಾವಿದ ಎಸ್.ಎಂ. ಅಂಗಡಿ, ಶ್ರೀ ಸಿದ್ಧಾರೂಢಮಠ ಟ್ರಸ್ಟ್ ಕಮಿಟಿ ಚೇರ್ ಮನ್ ಎನ್.ಎ. ಪಾಠಕ, ಕಲಾವಿದ ರಾಘವೇಂದ್ರ ಮುರಗೋಡ, ಅಬ್ದುಲ್ರಬ್ಬ ಕುಂಚನೂರ, ಪಾಂಡುರಂಗ ಪಮ್ಮಾರ, ಸುರೇಶ ಕಾಳಪ್ಪ, ಮೂರ್ತಿ ಕಲಾವಿದ ಸಾಯಿನಾಥ ಹಿತ್ತಾಳೆ, ಶಿವಕುಮಾರ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಗೌರವ ಅಧ್ಯಕ್ಷ ಮೋಹನ ಲಿಂಬಿಕಾಯಿ, ಅಮರೇಶ ಹಿಪ್ಪರಗಿ, ಅಲ್ತಾಫ ಕಿತ್ತೂರ, ಪಿ.ಎಂ. ಹೂಲಿ, ಶ್ಯಾಮಸುಂದರ ಹಬೀಬ, ಶ್ರೀಶೈಲಪ್ಪ ಶೆಟ್ಟರ, ಎಸ್.ಎಸ್. ಕಮಡೊಳ್ಳಿಶೆಟ್ಟರ, ಚಂದ್ರಶೇಖರ ಪಾಸ್ತೆ, ಶಿವಾನಂದ ಹಳ್ಳಿಕೇರಿ ಇದ್ದರು.

ಗಣೇಶ ವಿಸರ್ಜನೆ: ಪ್ರಶಸ್ತಿ
ಹುಬ್ಬಳ್ಳಿ: ನಗರದ ಹೂ ಬಳ್ಳಿಯ ಗೆಳೆಯರ ಬಳಗದಿಂದ ಸೆ. 18ರಂದು ಇಂದಿರಾ ಗಾಜಿನ ಮನೆ ಆವರಣದ ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜಿಸುವ ಪ್ರಥಮ 10 ಸಾರ್ವಜನಿಕ ಶ್ರೀ ಗಜಾನನ ಉತ್ಸವ ಸಮಿತಿಗಳಿಗೆ ಸತ್ಕಾರ, ರು. 1 ಸಾವಿರ ನಗದು ಬಹುಮಾನವನ್ನು ಬಾವಿ ಪಕ್ಕದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ನೀಡಲಾಗುವುದು. ಈ ಸಮಾರಂಭದ ಅಧ್ಯಕ್ಷತೆಯನ್ನು ಮಹಾನಗರ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ವಹಿಸಲಿದ್ದು, ಸಂಸದ ಪ್ರಹ್ಲಾದ ಜೋಶಿ ಹಾಗೂ ಎಸ್ಎಸ್ಕೆ ಸಮಾಜದ ಮುಖ್ಯ ಧರ್ಮದರ್ಶಿ ಗಿರಿಧರಸಾ ಕಾಟೀಗರ ಅತಿಥಿಗಳಾಗಿ ಪಾಲ್ಗೊಳ್ಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement