ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ

Mainashree
Updated On : 20 Sept 2013, 10:30 am

ಧಾರವಾಡ: ನಟಶೇಖರ ಪಂ. ಬಸವರಾಜ ಮನಸೂರ ಅವರ 35ನೇ ಪುಣ್ಯತಿಥಿ ದಿನದಂದು ಅವರ ಸ್ಮರಣಾರ್ಥ ರೈಜಿಂಗ್ ಸ್ಟಾರ್ಸ್ ಕಲ್ಚರಲ್ ಅಕಾಡೆಮಿ ಮತ್ತು ಪಂ. ಪುಟ್ಟರಾಜ ಗವಾಯಿಗಳ ಕಲಾಸ್ಪಂದನ ವೇದಿಕೆ ಆಶ್ರಯದಲ್ಲಿ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬುಧವಾರ ಜರುಗಿತು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಲಕ್ಷ್ಮಣ ಬಕ್ಕಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಂಗಭೂಮಿಯ ಅನರ್ಘ್ಯರತ್ನ ಪಂ. ಬಸವರಾಜ ಮನಸೂರ ಅವರ ಅನುಪಮ ಸೇವ್ನೆ ಪರಿಗಣಿಸಿ, ಮನಸೂರ ಮನೆತನವಾಗಲಿ ಅಥವಾ ಧಾರವಾಡ ಜಿಲ್ಲೆಯ ಪ್ರಜ್ಞಾವಂತ, ಕಲಾಪರಿಣಿತರು, ರಾಜಕೀಯ ಮುಖಂಡರು ಸೇರಿ ಬಸವರಾಜ ಮನಸೂರ ಅವರ ಹೆಸರು ಧಾರವಾಡದ ಸಾಂಸ್ಕೃತಿಕ ನಗರಿಯಲ್ಲಿ ಸದಾ ಹಚ್ಚ-ಹಸಿರಾಗಿರುವಂತೆ ಮಾಡಬೇಕಾಗಿತ್ತು. ದುರದೃಷ್ಟವಶಾತ್ ಯಾರೊಬ್ಬರೂ ಇವರತ್ತ ಗಮನಹರಿಸದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಅತಿಥಿಗಳಾಗಿದ್ದ ಧಾರವಾಡ ಹೈಕೋರ್ಟ್ ವಕೀಲರ ಸಂಘದ ಛಅಧ್ಯಕ್ಷ ಬಿ.ಡಿ. ಹಿರೇಮಠ, ಸಾಹಿತಿ ಮೋಹನ ನಾಗಮ್ಮನವರ, ಪತ್ರಕರ್ತ ಎಸ್.ಎಸ್. ಚಿಕ್ಕಮಠ, ಪಾಲಿಪಂಡಿತ ರವಿಕುಮಾರ ಬೇವಿನಗಿಡದ, ನ್ಯಾಯವಾದಿ ಪ್ರಕಾಶ ಉಡಿಕೇರಿ, ನಿವೃತ್ತ ಶಿಕ್ಷಣಾಧಿಕಾರಿ ಎಸ್.ಡಿ. ನೀಲಣ್ಣವರ್, ನ್ಯಾಯವಾದಿ ಹಡಪದ ಮತ್ತು ನಗರಸಭೆ ಸದಸ್ಯೆ ಮೀನಾಕ್ಷಿ, ಪ್ರಗತಿಪರ ಚಿಂತಕ ಮಹಮ್ಮದಅಲಿ ಗೂಡುಬಾಯಿ ಮತ್ತಿತರರು ಮಾತನಾಡಿದರು. ಕವಿವಿ ಅತಿಥಿ ಉಪನ್ಯಾಸಕ ಡಾ೤ ವಿಶ್ವನಾಥ ಚಿಂತಾಮಣಿ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement