ಗಜಾನನ ಉತ್ಸವ ಸಮಿತಿಗಳಿಗೆ ಪ್ರೋತ್ಸಾಹಧನ
ಹುಬ್ಬಳ್ಳಿ: ನಗರದಲ್ಲಿ ಬುಧವಾರ ನಡೆದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದಲ್ಲಿ ಮೊದಲು ಮೂರ್ತಿ ವಿಸರ್ಜಿಸಿದ 10 ಸಾರ್ವಜನಿಕ ಗಜಾನನ ಉತ್ಸವ ಸಮಿತಿಗಳಿಗೆ ಹೂ-ಬಳ್ಳಿ ಗೆಳೆಯರ ಪರ ತಲಾ ರು. 1 ಸಾವಿರ ನೀಡಿ, ಸಮಿತಿ ಅಧ್ಯಕ್ಷರನ್ನು ಸತ್ಕರಿಸಲಾಯಿತು.
ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಬಾವಿಯಲ್ಲಿ ಬುಧವಾರ ಮಧ್ಯಾಹ್ನ 3.25ಕ್ಕೆ ಗಣೇಶ ಮೂರ್ತಿ ವಿಸರ್ಜಿಸಿದ ತೊರವಿ ಹಕ್ಕಲನ ಶ್ರೀ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಮೇಸ್ತ್ರಿ, ಸಂಜೆ 6.10ಕ್ಕೆ ಮೂರ್ತಿ ವಿಸರ್ಜಿಸಿದ ಕೌಲಪೇಟ ಕುಂಬಾರ ಓಣಿಯ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ಲದವಾ, ರಾತ್ರಿ 7.04ಕ್ಕೆ ಮೂರ್ತಿ ವಿಸರ್ಜಿಸಿದ ಬಾನಿ ಓಣಿಯ ಗಣೇಶ ಉತ್ಸವ ಮಂಡಳದ ಈಶ್ವರ ಶಿರಕೋಳ, ರಾತ್ರಿ 8ಕ್ಕೆ ಮೂರ್ತಿ ವಿಸರ್ಜಿಸಿದ ದಾಜಿಬಾನ್ ಪೇಟ ಗೌಳಿಗಲ್ಲಿಯ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ನಿಂಗಪ್ಪ ಕುರಿಯವರ, ರಾತ್ರಿ 8.10ಕ್ಕೆ ಮೂರ್ತಿ ವಿಸರ್ಜಿಸಿದ ಕಂಚಗಾರ ಗಲ್ಲಿಯ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲ ಕಾಂಬಳೆ, ಅರಳಿಕಟ್ಟಿ ಓಣಿಯ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ವಿನಾಯಕ ಹಬೀಬ, 8.25ಕ್ಕೆ ಮೂರ್ತಿ ವಿಸರ್ಜಿಸಿದ ದಾಜಿಬಾನ್‌ಪೇಟ ಸಾಲ ಓಣಿ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ನಾಗರಾಜ ಕಬಾಡೆ, 8.30ಕ್ಕೆ ಮೂರ್ತಿ ವಿಸರ್ಜಿಸಿದ ಬಾಬಾಸಾನ ಗಲ್ಲಿ ಗಜಾನನ ಉತ್ಸವ ಯುವಕ ಮಂಡಳ ಅಧ್ಯಕ್ಷ ಚಂದ್ರಕಾಂತ ಪಡತಾರೆ, ರಾತ್ರಿ 8.40ಕ್ಕೆ ಮೂರ್ತಿ ವಿಸರ್ಜಿಸಿದ ಸರಾಫ್ ಕಟ್ಟಿಯ ಗಣೇಶ ಉತ್ಸವ ಮಂಡಳದ ಅಧ್ಯಕ್ಷ ವಿಠ್ಠಲ ಪೂಜಾರಿ, ರಾತ್ರಿ 9.50ಕ್ಕೆ ಮೂರ್ತಿ ವಿಸರ್ಜಿಸಿದ ವೀರಾಪುರ ಓಣಿಯ ಕರಿಯಮ್ಮದೇವಿ ಯುವಕ ಮಂಡಳ ಅಧ್ಯಕ್ಷ ಶೇಖರ ಬಿಜವಾಡ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ: ಮಹಾನಗರ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಅಧ್ಯಕ್ಷತೆ ವಹಿಸಿದ್ದರು. ಐಎಎಸ್ ಅಧಿಕಾರಿ ಚಾರುಲತಾ, ಗಿರಿಧರ ಕಾಟೀಗರ, ಡಾ ಸಿದ್ಧನಗೌಡ ಪಾಟೀಲ, ಶರದ ಮಗಜಿ, ನೀಲಕಂಠ ಜಡಿ, ಮೋಹನ ಹಿರೇಮನಿ, ಡಿ.ಕೆ. ಚವ್ಹಾಣ, ಪಿ.ಎ. ಇರಕಲ್ ಅತಿಥಿಗಳಾಗಿದ್ದರು. ಜಾದುಗಾರ ಸಂಜು ಇರಕಲ್‌ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಭಾಸ್ಕರ ಜಿತೂರಿ, ಸುಭಾಷ ಬೆಳಗಲಿ, ತಾರಾನಾಥ ಪೂಜಾರಿ, ವಿನಾಯಕ ಹಬೀಬ, ವಿ.ಎಸ್. ಗಿಡ್ನವರ, ಜೆ.ವಿ. ಇರಕಲ್, ಗುರು ಪಾಟೀಲ ಇದ್ದರು. ಎಸ್.ಆರ್. ಪವಾರ ನಿರೂಪಿಸಿದರು. ಮೃತ್ಯುಂಜಯ ಅರಳಿಮಟ್ಟಿಮಠ ವಂದಿಸಿದರು.