ಅಣ್ಣಿಗೇರಿ: ಮಾತೃ ವಂದನಾ ಸಮಾರಂಭ
ಅಣ್ಣಿಗೇರಿ: ಸ್ಥಳೀಯ ಎನ್.ಎಸ್. ಹೂಗಾರ ಸಮೂಹ ಶಿಕ್ಷಣ ಸಂಸ್ಥೆಗಳು ಮಹಾವಿದ್ಯಾಲಯದಲ್ಲಿ ಮಾತೃ ವಂದನಾ ಸಮಾರಂಭವನ್ನು ಆಯೋಜಿಸಿದ್ದವು.
ಪ್ರಾಚಾರ್ಯ ಎಸ್.ಎಸ್. ಹರ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಯಿ ಎಂದರೆ ಕರುಣಾಸಾಗರ, ದಯಾಮೂರ್ತಿ, ಸಂಸಾರದ ತೊಡಕುಗಳನ್ನು ನಿರಾತಂಕವಾಗಿ ಪರಿಹರಿಸಬಲ್ಲಳು. ಅಂತಹ ತಾಯಿಗೆ ನಾವೆಲ್ಲ ಕೃತಜ್ಞರಾಗಿರಬೇಕು. ತಾಯಿ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಮಲ್ಲಿಕಾರ್ಜುನ ಸುರಕೋಡ, ಚಂಬಣ್ಣ ಹುಬ್ಬಳ್ಳಿ, ಮೃತ್ಯುಂಜಯ ನವಲಗುಂದ, ಮುಖ್ಯ ಶಿಕ್ಷಕಿಯರಾದ ವೇದಾ ಕಟ್ಟಿ, ಫರೀದಾ ತಹಸೀಲ್ದಾರ್, ಪಾಲಕರು, ಅಧ್ಯಾಪಕರು, ಶಿಕ್ಷಕರು ಸಿಬ್ಬಂದಿ, ವಿದ್ಯಾರ್ಥಿಗಳು ಮುಂತಾದವರು ಭಾಗವಹಿಸಿದ್ದರು.
ವಿದ್ಯಾರ್ಥಿನಿ ದೀಪ್ತಿ ಜಡಿ ವಚನ ಪಠಣ ಮಾಡಿದರು. ಹೇಮಾ ಮಲ್ಲನಗೌಡರ ಹಾಗೂ ಸಂಗಡಿಗರು ತಾಯಿಯ ಕುರಿತು ಸಮೂಹ ಗೀತೆ ಹಾಡಿದರು. ಗೀತಾ ಪರಪ್ಪನವರ ಸ್ವಾಗತಿಸಿದರು. ವೈಷ್ಣವಿ ಹಾಳದೋಟರ ನಿರೂಪಿಸಿದರು. ಪೂಜಾ ಓಸೇಕರ ವಂದಿಸಿದರು.