ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹೊರನಾಡ ಕನ್ನಡಿಗರ ಸೈಕಲ್ ಸವಾರಿ

Lingaraj Badiger
Updated On : 24 Sept 2013, 11:12 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 23
ಗಡಿನಾಡ ಗೋಳು ಕೇಳುವವರಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಬೆಂಗಳೂರಿಗೆ ಸೈಕಲ್ ಮೇಲೆ ಪಯಣಿಸುತ್ತಿರುವ ಹೊರನಾಡ ಕನ್ನಡಿಗರ ಸೈಕಲ್ ಸವಾರಿ ಸೋಮವಾರ ಹುಬ್ಬಳ್ಳಿ ನಗರಕ್ಕೆ ಆಗಮಿಸಿತು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಹೊರನಾಡ ಕನ್ನಡಿಗರಾದ ಸುಭಾಷ ಬೆಳ್ಳಟ್ಟಿ ಮತ್ತು ಗಿರಿಮಲ್ಲ ಮುಡಚಿ, 'ಗಡಿನಾಡ ನಡಿಗೆ ಬೆಂಗಳೂರು ಕಡೆಗೆ' ಎಂಬ ಉದ್ದೇಶ ಇರಿಸಿಕೊಂಡು ಸೆ. 19ರಂದು ಜತ್ತ ತಾಲೂಕಿನ ಸಿಂಧೂರ ಗ್ರಾಮದಿಂದ ಸೈಕಲ್ ಸವಾರಿ ಆರಂಭಿಸಿದ್ದಾರೆ. ಹೊರನಾಡ ಕನ್ನಡಿಗರಿಬ್ಬರ ಸೈಕಲ್ ಸವಾರಿ ಬಿಜಾಪುರದ ಸಾವಳಗಿ, ಜಮಖಂಡಿ, ಮುಧೋಳ, ರಾಮದುರ್ಗ, ಸವದತ್ತಿ ಧಾರವಾಡ ಮಾರ್ಗವಾಗಿ ಹುಬ್ಬಳ್ಳಿ ಪ್ರವೇಶಿಸಿದ್ದಾರೆ. 'ಗಡಿನಾಡ ನಡಿಗೆ ಬೆಂಗಳೂರು ಕಡೆಗೆ' ಸೈಕಲ್ ಸವಾರಿ ಸೆ. 26ರಂದು ಬೆಂಗಳೂರು ತಲುಪಲಿದೆ.
ಸೈಕಲ್ ಜಾಥಾ ಕುರಿತು ಮಾತನಾಡಿದ ಹೊರನಾಡ ಕನ್ನಡಿಗರಿಬ್ಬರು, ರಾಜ್ಯ ಸರ್ಕಾರ ಗಡಿ ಮತ್ತು ಹೊರನಾಡ ಕನ್ನಡಿಗರ ಕಲ್ಯಾಣದ ಬಗ್ಗೆ ದಿಟ್ಟ ಕ್ರಮ ತೆಗೆದುಕೊಳ್ಳಬೇಕಿದೆ. ಶಿಕ್ಷಣ, ನೌಕರಿಯಲ್ಲಿ ಶೇ. 5ರಷ್ಟು ಮೀಸಲಾತಿ ಕಲ್ಪಿಸಬೇಕು. ಹಿಪ್ಪರಗಿ, ಹಿರೇಪಡಸಲಗಿ ಬ್ಯಾರೇಜ್‌ನಿಂದ ಗಡಿನಾಡ ಕನ್ನಡಿಗರಿಗೂ ನೀರಾವರಿ ಸೌಲಭ್ಯ ಲಭಿಸಬೇಕು ಎನ್ನುವುದು ಈ ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದರು.
ಕೇದಾರನಾಥ ಜಲಪ್ರಳಯದಲ್ಲಿ ಕನ್ನಡಿಗರನ್ನು ರಕ್ಷಿಸಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೂ ಕೃತಜ್ಞತೆ ಸಲ್ಲಿಸುವುದು ಈ ಸೈಕಲ್ ಜಾಥಾದ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement