ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕ್ಯಾನ್ಸರ್ ಆಸ್ಪತ್ರೆ ಅಭಿವೃದ್ಧಿಗೆ ರು. 4 ಕೋಟಿ ವೆಚ್ಚ

Lingaraj Badiger
Updated On : 25 Sept 2013, 11:17 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 24
ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಅಭಿವೃದ್ಧಿಗೆ ರು. 4 ಕೋಟಿ ವೆಚ್ಚ ಮಾಡಲಾಗಿದೆ ಎಂದು ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ, ಹಿರಿಯ ವೈದ್ಯ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಹೇಳಿದರು.
ನವನಗರದ ಕ್ಯಾನ್ಸರ್ ಆಸ್ಪತ್ರೆಯ ಬೆಳ್ಳಿ ಹಬ್ಬದ ಸ್ಮಾರಕ ಭವನದಲ್ಲಿ ಇತ್ತೀಚೆಗೆ ಜರುಗಿದ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಶೀಘ್ರವಾಗಿ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಪೂರಕವಾದ ಅತ್ಯಾಧುನಿಕ ಲಿನಿಯರ್ ಎಕ್ಸಲರೇಟರ್‌ದಂತಹ ಉಪಕರಣಗಳನ್ನು ಅಳವಡಿಸುವ ಮೂಲಕ ರೋಗ್ನ ಗುಣಪಡಿಸುವಲ್ಲಿ ವೈದ್ಯಕೀಯ ತಂತ್ರಜ್ಞಾನ್ನ ಹೊಂದಿದ ಉ-ಕದ ಏಕೈಕ ಆಸ್ಪತ್ರೆಯಾಗಿದೆ ಎಂದರು.
ಅತ್ಯಾಧುನಿಕ ತಂತ್ರಜ್ಞಾನದ ಶ್ರೇಷ್ಠ ಗುಣಮಟ್ಟದ ರಕ್ತ ಭಂಡಾರವನ್ನು ಆಸ್ಪತ್ರೆಯಲ್ಲಿ ಹೊಂದಲಾಗಿದ್ದು, ಈ ಮೂಲಕ ಸಕಾಲದಲ್ಲಿ ಅಪೇಕ್ಷಿತ ರಕ್ತ ಪೂರೈಕೆ ಮಾಡುವುದರೊಂದಿಗೆ ಬಹಳಷ್ಟು ರೋಗಿಗಳ ಜೀವ ರಕ್ಷಣೆ ಮಾಡಿದ ಹೆಮ್ಮೆ ಸಂಸ್ಥೆಗಿದೆ. ನಾಡಿನಾದ್ಯಂತ ಉಚಿತ ರಕ್ತದಾನ ಶಿಬಿರ ಹಾಗೂ ಆರೋಗ್ಯ ಜಾಗೃತಿ ಶಿಬಿರಗಳನ್ನು ಸಂಘಟಿಸುವ ಮೂಲಕ ರಕ್ತ ಭಂಡಾರಕ್ಕೆ ರಕ್ತ ಸಂಗ್ರಹಣೆ ಕಾರ್ಯವನ್ನೂ ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಮಹಾದಾನಿ ಶತಾಯುಷಿ ಜಿ.ಜಿ. ದೊಡವಾಡ ಇದೇ ಸಂದರ್ಭ ಅವಿರೋಧವಾಗಿ ಆಯ್ಕೆಯಾದರು.  
ಸಂಸ್ಥೆಯ ನಿರ್ದೇಶಕರಾದ ವೀರೇಂದ್ರ ಛಡ್ಡಾ, ಡಾ.ಎಸ್.ಎಸ್.ಹಿರೇಮಠ, ಡಾ.ವಿವೇಕ ಯಳಮಲ್ಲಿ, ಬಸವರಾಜ ಪಾಟೀಲ, ಲೀಲಾಬಾಯಿ ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಡಾ. ಸುಭಾಸ ಜೋಶಿ ವೈದ್ಯಕೀಯ ಅಧೀಕ್ಷಕ ಡಾ. ಎ.ಸಿ.ಡೇಕಾ, ರಕ್ತ ಭಂಡಾರದ ಮುಖ್ಯಕಾರ್ಯನಿರ್ವಾಕ ಅಧಿಕಾರಿ ಡಾ.ಉಮೇಶ ಹಳ್ಳಿಕೇರಿ, ತಿಲಕ ವಿಕ್ರಂಚೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಾನಿ ಎ.ಎಸ್. ಮೆಳ್ಳಿಗೇರಿ ಇವರು ಆಸ್ಪತ್ರೆಯ ಅಭಿವೃದ್ಧಿಗೆ ದೇಣಿಗೆ ನೀಡಿದರು. ಡಾ. ಎ.ಸಿ.ಡೇಕಾ ಸ್ವಾಗತಿಸಿದರು. ಶಂಕರ ಜೋಶಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement