ಶ್ರದ್ಧೆಯಿಂದ ಅಧ್ಯಯನ ಮಾಡಿ
ಹುಬ್ಬಳ್ಳಿ: ಉಪನ್ಯಾಸಕರಾಗಬಯಸುವ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕೆಂದು ದಾವಣಗೆರೆ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಡಾ.ಕೆ.ಎಸ್. ಶ್ರೀಧರ ಹೇಳಿದರು.
ಕೆಎಲ್‌ಇ ಸಂಸ್ಥೆಯ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಸ್ನ್ನಾತಕೋತ್ತರ ಗಣಿತ ವಿಭಾಗದ ವತಿಯಿಂದ ಆಯೋಜಿಸಿದ್ದ ಯುಜಿಸಿ ನೆಟ್ ಮತ್ತು ಸೆಟ್ ತರಬೇತಿ ಹಾಗೂ ಮಾರ್ಗದರ್ಶನ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನ್ನು ಸಂಗ್ರಹಿಸಿ, ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಂ.ಟಿ. ಕುರಣಿ ಈ ಭಾಗದ ವಿದ್ಯಾರ್ಥಿಗಳು ಈ ತರಹದ ಸೌಲಭ್ಯಗಳನ್ನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಸಂಯೋಜಕ ಡಾ ಎಂ.ಎಂ. ಪಟ್ಟಣಶೆಟ್ಟಿ ಸ್ವಾಗತಿಸಿದರು. ಕೆ.ಜಿ. ಚಾರುಮತಿ ಪ್ರಾರ್ಥಿಸಿದರು. ಪ್ರೊ. ಎಸ್.ಜಾನಕಿ ವಂದಿಸಿದರು. ವಿದ್ಯಾರಾಣಿ ಗೋಣಿ ನಿರೂಪಿಸಿದರು. ಐವತ್ತಕ್ಕೂ ಹೆಚ್ಚು ಪರೀಕ್ಷಾರ್ಥಿಗಳು, ಡಾ.ಬಿ.ಬಿ. ಹುಲಮನಿ, ಡಾ.ಎಚ್. ಬಿ.ಬೆಳಗಲಿ, ಗ್ರಂಥಪಾಲಕ ಬಿ.ಎಸ್.ಮಾಳವಾಡ, ವಿ.ಬಿ. ಬಬ್ಲಿ, ಗಣಿತಶಾಸ್ತ್ರದ ಉಪನ್ಯಾಸಕರಾದ ಎಸ್. ಮಂಜುನಾಥ, ಪ್ರವೀಣ ಪಾಟೀಲ ಮುಂತಾದವರು ಇದ್ದರು.