ಧಾರವಾಡ: ಆಯತಪ್ಪಿ ಬಿದ್ದು ಕಾರ್ಮಿಕ ಸಾವು
ಧಾರವಾಡ: ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ವ್ಯಕ್ತಿಯೋರ್ವ ನಿಚ್ಚಣಿಕೆಯಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದಿದೆ. ಮೂಲತಃ ಆಸ್ಸಾಂ ರಾಜ್ಯದ ರಿಯಾಜುದ್ದೀನ್ ತಜಮುದ್ದಿನ್ ಲಷ್ಕರ(23) ಮೃತಪಟ್ಟ ವ್ಯಕ್ತಿ. ಇಲ್ಲಿಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿಯ ಗೋವಾ ಮಿನರಲ್ ಪ್ರೈ.ಲಿ. ಕಂಪನಿಯ ಕಟ್ಟಡ ಕಟ್ಟಲು ಆಗಮಿಸಿದ್ದ ಈತ ಬೆಳಗ್ಗೆ ನಿಚ್ಚಣಿಕೆ ಸಹಾಯದಿಂದ ಮೇಲೆ ಹತ್ತಿದ್ದ ಸಂದರ್ಭ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡ ಗರಗ ಠಾಣೆ ಪೊಲೀಸರು ತಿಳಿಸಿದ್ದಾರೆ.