ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಿರಿಯರ ನಿರೀಕ್ಷೆಯಂತೆ ಸರ್ಕಾರದ ಆಡಳಿತ ನಡೀತಿಲ್ಲ: ಸದಾನಂದ ಗೌಡ

Lingaraj Badiger
Updated On : 26 Sept 2013, 11:33 am

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 25
ಯುವ ಜನಾಂಗ ಸ್ವಾಭಿಮಾನದಿಂದ ಬದುಕಬೇಕೆಂಬ ಉದ್ದೇಶದಿಂದ ನಮ್ಮ ಹಿರಿಯರು ತಂದು ಕೊಟ್ಟ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವನ್ನು ಸರಿಯಾಗಿ ಬಳಸಿಕೊಳ್ಳದೇ ಅವರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವಲ್ಲಿ ದೇಶದ ಎಲ್ಲ ಆಡಳಿತ ಸರ್ಕಾರಗಳು ವಿಫಲವಾಗಿವೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಹೇಳಿದರು.
ಇಲ್ಲಿನ ನೌಕರರ ಭವನದಲ್ಲಿ ಬುಧವಾರ ನಡೆದ ದೀನದಯಾಳ ಅವರ 92ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು, ವಾಜಪೇಯಿ ಅಂತಹ ಹಿರಿಯ ರಾಜಕಾರಣಿಗಳು ಹಾಗೂ ದೀನದಯಾಳ ಉಪಾಧ್ಯಾಯ, ಶ್ಯಾಂ ಪ್ರಸಾದ ಮುಖರ್ಜಿ ಅಂತಹ ಜನಸಂಘದ ಪ್ರಮುಖರ ಆದರ್ಶ, ವಿಚಾರ, ಮೌಲ್ಯಗಳು ಈಗಿನ ಯಾವ ರಾಜಕಾರಣಿಗಳಿಗೂ ಇಲ್ಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಬೆಲ್ಲದ ಪ್ರಾಸ್ತಾವಿಕ ಮಾತನಾಡಿದರು. ಜನಸಂಘದಲ್ಲಿ ಸೇವೆ ಸಲ್ಲಿಸಿದ ಹಿರಿಯರಾದ ಚಂದ್ರು ನೀಲಗಾರ, ಗಿರದರ ದೇಶಪಾಂಡೆ, ಚನ್ನಪ್ಪಗೌಡ ಪಾಟೀಲ, ಡಾ.ಜೆ.ಎಸ್. ಬೋರಕರ ಅವರನ್ನು ಡಿ.ವಿ. ಸದಾನಂದಗೌಡರು ಸನ್ಮಾನಿಸಿದರು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿದರು. ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಶಂಕರ ಶೆಳಕೆ, ಪ್ರಕಾಶ ಗೋಡಬೋಲೆ, ಅರವಿಂದ ಏಗನಗೌಡರ ಇದ್ದರು. ಮೋಹನ ರಾಮದುರ್ಗ ನಿರೂಪಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement