ಓಝೋನ್ ವಲಯ ಸಂರಕ್ಷಣೆಗೆ ಅಗತ್ಯ: ಒಡ್ಡೀನ
ಧಾರವಾಡ: ಶತ-ಶತಮಾನಗಳಿಂದ ಮಾನವ ಕುಲಕೋಟಿ ಒಳಗೊಂಡಂತೆ ಸಕಲ ಜೀವರಾಶಿಗಳನ್ನು ರಕ್ಷಿಸುವ ಜೀವಿಗಳ ರಕ್ಷಕ ಪದರು ಓಝೋನ ರಂಧ್ರವಾಗಿರುವುದು ಹಾಗೂ ನಶಿಸುತ್ತಿರುವುದು ಆತಂಕದ ವಿಷಯ ಎಂದು ರಾಜ್ಯ ಪರಿಸರ ಸಂರಕ್ಷಣಾ ಜಾಗೃತ ವೇದಿಕೆ ಕಾರ್ಯದರ್ಶಿ ವೀರಣ್ಣ ಒಡ್ಡೀನ ವಿಷಾದಿಸಿದರು. ತಾಲೂಕಿನ ಸೋಮಾಪುರದ ಭಾರತಿ ವಿಶ್ವ ಸೇವಾ ಸದನ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಇಕೋ ಕ್ಲಬ್ ಅಡಿ ವಿಶ್ವ ಓಝೋನ್ ದಿನಾಚರಣೆಯಲ್ಲಿ ಮಾತನಾಡಿದರು. ಓಝೋನ್ ಪದರ ನಾಶವಾಗಲು ಮಾನವ ನಿರ್ಮಿತ ಕೈಗಾರಿಕೆ, ಏರ್ ಕಂಡೀಷನರ್‌ಗಳಿಂದ ಉತ್ಪತ್ತಿಯಾಗುವ ಕ್ಲೋರೊಫ್ಲೋರೊ ಕಾರ್ಬನ್ ಕಾರಣ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕಿ ಗೀತಾ ರುಬ್ದಿ ಮಾತನಾಡಿದರು. ಇದೇ ಸಂದರ್ಭ ಓಝೋನ್ ಕುರಿತು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಶೋಭಾ ಕಾಳೆ, ನಿರೂಪಾ ಪಾಟೀಲ, ಜಿ.ಎಂ. ನಿಡಗುಂದಿ ಇದ್ದರು. ಕಾವ್ಯಾ ಜುಟ್ಟಣ್ಣವರ್ ಸ್ವಾಗತಿಸಿದರು. ಸುವರ್ಣ ಕರೀಕಟ್ಟಿ ನಿರೂಪಿಸಿದರು. ಪರಶುರಾಮ ಕಡೇಮನಿ ವಂದಿಸಿದರು.