ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಮಾಜದ ಪುನರ್‌ವಿಮರ್ಶೆಗೆ ಭಾಷಾಂತರ

Lingaraj Badiger
Updated On : 27 Sept 2013, 10:58 am

ಧಾರವಾಡ: ನಮ್ಮ ಸಂಸ್ಕೃತಿ ಮತ್ತು ಸಮಾಜದ ಪುನರ್ ವಿಮರ್ಶೆಗಾಗಿ ಭಾಷಾಂತರ ಅತಿ ಅವಶ್ಯಕ ಎಂದು ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಪ್ರಧಾನ ಗುರುದತ್ತ ಹೇಳಿದರು. ನಗರದ ಕೆ.ಎಸ್. ಜಿಗಳೂರು ಕಲಾ ಮತ್ತು ಡಾ.ಎಸ್.ಎಂ. ಶೇಷಗಿರಿ ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ಜಾಗತೀಕರಣ ಸಂದರ್ಭ ಅನುವಾದದ ಕಾರ್ಯ ಎಂಬ ವಿಷಯ ಕುರಿತು ಎರಡು ದಿನಗಳ ಹಮ್ಮಿಕೊಂಡಿರುವ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಅನುವಾದಕ್ಕೆ ಎಷ್ಟರಮಟ್ಟಿಗೆ ಪ್ರಾಶಸ್ತ್ಯ ದೊರಕಬೇಕಿದೆಯೋ ಅಷ್ಟರಮಟ್ಟಿಗೆ ದೊರಕಿದ್ದು, ಅನುವಾದಕರು ನಾವು ಕೆಳಮಟ್ಟದ ಲೇಖಕರು ಎಂದು ಭಾವಿಸಬೇಕಾದ ಅಗತ್ಯವಿಲ್ಲ. ಅನುವಾದಕರು ಸಮಾಜಕ್ಕೆ ಒಳ್ಳೆಯ ಭಾಷಾಂತರ ರೂಪದ ಬರವಣಿಗೆಗಳನ್ನು ನೀಡಬೇಕು ಎಂದರು. ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿ ಖಜಾಂಚಿ ಎಸ್.ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ.ಆರ್. ಲಕ್ಷೀ, ಪ್ರೊ.ಉಷಾದೇವಿ ಕೋಹಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement