ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಾಸ್ತ್ರೀಯ ಭಾಷೆ ಕೇಂದ್ರ ಕಚೇರಿ ಧಾರವಾಡದಲ್ಲಿ ತೆರೆಯಲಿ

Lingaraj Badiger
Updated On : 28 Sept 2013, 10:52 am

ಧಾರವಾಡ: ಶಾಸ್ತ್ರೀಯ ಭಾಷೆ ಬಗ್ಗೆ ಸಂಬಂಧಿಸಿದ ಕೇಂದ್ರ ಕಚೇರಿಯನ್ನು ಧಾರವಾಡದಲ್ಲಿ ತೆರೆಯಬೇಕೆಂದು ಡಾ. ಪಾಟೀಲ ಪುಟ್ಟಪ್ಪ ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಕನ್ನಡ ಶಾಸ್ತ್ರೀಯ ಭಾಷೆ ಆಗಬೇಕೆನ್ನುವ ಬಗ್ಗೆ ಧಾರವಾಡವು ಮುಂಚೂಣಿಯಲ್ಲಿ ನಿಂತಿದ್ದಿತು. ನಾನು ಒಂದೆರಡು ಸಲ ದಿಲ್ಲಿಗೆ ಹೋದಾಗ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಕೊಡಬೇಕೆಂದು ಪ್ರಧಾನಮಂತ್ರಿಯನ್ನು ಮಾನವ ಸಂಪನ್ಮೂಲ ಇಲಾಖೆ ಮಂತ್ರಿಗಳನ್ನು ಕೇಳಿದ್ದೆ. ಕನ್ನಡ ಸಾಹಿತ್ಯ ಸಂಸ್ಕೃತಿಗಳಿಗೆ ಸಂಬಂಧಿಸಿದ ಎಲ್ಲ ವಿಚಾರಗಳು ಮೈಸೂರು ಬೆಂಗಳೂರಿಗೆ ಸೀಮಿತವಾಗಬಾರದು. ಅವು ಹು-ಧಾ, ಬೆಳಗಾವಿ, ಬಿಜಾಪುರ, ಗುಲ್ಬರ್ಗ, ದಾವಣಗೆರೆ, ಚಿತ್ರದುರ್ಗ ಮೊದಲಾದ ಸ್ಥಳಗಳಿಗೂ ಹಬ್ಬಬೇಕು. ಧಾರವಾಡದವರು ಮೈಸೂರು ಬೆಂಗಳೂರಿಗೆ ಹೋದಂತೆ ಮೈಸೂರು, ಬೆಂಗಳೂರಿನವರು ಧಾರವಾಡಕ್ಕೆ ಬರಲಿ. ಅದರಿಂದ ಈ ಶಾಸ್ತ್ರೀಯ ಭಾಷೆಯ ಕೇಂದ್ರ ಕಚೇರಿ ಧಾರವಾಡದಲ್ಲಿ ಬರಬೇಕೆಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement