ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿಯಲ್ಲಿ 29ರಂದು ಶಿಕ್ಷಕರ ಚಿಂತನ-ಮಂಥನ

Lingaraj Badiger
Updated On : 28 Sept 2013, 10:48 am

ಹುಬ್ಬಳ್ಳಿ: ಕಳೆದ 5-6 ವರ್ಷಗಳಿಂದ ನಿಷ್ಕ್ರಿಯ ಆಡಳಿತದಿಂದಾಗಿ ಶಿಕ್ಷಕರು ಹಾಗೂ ಶಿಕ್ಷಣರಂಗ ಹಲವಾರು ಹೊಸ ಸಮಸ್ಯೆಗಳಿಗೆ ಎದೆಯೊಡ್ಡಬೇಕಾಗಿದೆ. ಇದರಿಂದಾಗಿ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ದೊರೆಯದೇ ಹೋದಲ್ಲಿ ಮುಂದೊಂದು ದಿನ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಗಂಡಾಂತರಗಳು ಬರುವ ಸೂಚನೆ ಕಾಣಬರುತ್ತಿವೆ.
ವಿಶೇಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಳಿವು ಉಳಿವು ತೀರಾ ಕಷ್ಟವಾಗಿದೆ. ಇಂತಹ ಹತ್ತು ಹಲವು ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯಮಟ್ಟದ ಚಿಂತನ-ಮಂಥನ ಕಾರ್ಯಕ್ರಮವನ್ನು ಸೆ. 29ರಂದು ಬೆಳಿಗ್ಗೆ 10.30ಕ್ಕೆ ಹುಬ್ಬಳ್ಳಿಯ ದೇಶಪಾಂಡೆ ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನುದಾನರಹಿತ ಸೇವೆಯನ್ನ್ನು ಎಲ್ಲ ಸೌಲಭ್ಯಗಳಿಗೆ ಪರಿಗಣಿಸುವ ಬಗ್ಗೆ ನ್ಯಾಯಾಲಯದ ಆದೇಶ್ನ ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಬೇಕಿದೆ. 1990ಕ್ಕಿಂತ ಪೂರ್ವದಲ್ಲಿ ಹಾಗೂ ನಂತರದಲ್ಲಿ ಅನುಮೋದನೆಗೊಂಡ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಸಿಬ್ಬಂದಿ ಅನುದಾನರಹಿತ ಸೇವೆ ಪರಿಗಣಿಸಿ ಕಾಲ್ಪನಿಕವಾಗಿ ವೇತನ ನಿಗದಿಪಡಿಸಿ ಆರ್ಥಿಕ ಸೌಲಭ್ಯ ನೀಡಿರುವ ಎಲ್ಲ ಪ್ರಕರಣಗಳಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಗಳು ಅಂತಹ ಸಿಬ್ಬಂದಿಯ ವೇತನವನ್ನು ಪುನರ್ ನಿಗದಿಗೊಳಿಸಿ ತಪ್ಪಾಗಿ ವೇತನ ನಿಗದಿಪಡಿಸಿದ್ದನ್ನ್ನು ವಾಪಸ್ ಪಡೆಯಲು ಸರ್ಕಾರ 2002ರಲ್ಲಿ ಆದೇಶ ಹೊರಡಿಸಲಾಗಿತ್ತು. ಇದರ ವಿರುದ್ಧ ನಮ್ಮ ಸಂಘವು ಇತರೆ ಶಿಕ್ಷಕರ ಸಂಘಗಳ ಜೊತೆಗೂಡಿ ಹೋರಾಟ ಮಾಡಿದ್ದರಿಂದ ಸರ್ಕಾರದ ಆದೇಶ ತಡೆಹಿಡಿಯಲಾಯಿತು.
ತಾವು ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಕಡತವನ್ನ್ನು ಪುನರ್ ಪರಿಶೀಲನೆಗೆ ತರಿಸಿ ಈ ಸಮಸ್ಯೆಯನ್ನು ಮೂಲೋತ್ಪಾಟನೆ ಮಾಡಬೇಕೆಂಬ ಉದ್ದೇಶದಿಂದ ವಿಷಯವನ್ನ್ನು ಆಗಿನ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗಮನಕ್ಕೆ ತರಲಾಗಿತ್ತು. ಬಳಿಕ ಕಡತ ಆರ್ಥಿಕ ಇಲಾಖೆಗೆ ಹೋದಾಗ 2007ರಲ್ಲಿ ಹಣಕಾಸು ಸಚಿವರ ಆದೇಶವನ್ನು ಇಲಾಖೆ ತಿರಸ್ಕರಿಸಿತು.
ನಂತರ 6 ವರ್ಷಗಳಾದರೂ ಈ ಕುರಿತು ಸರ್ಕಾರದ ಮಟ್ಟದಲ್ಲಿ ಸಚಿವ ಸಂಪುಟಕ್ಕೆ ಮಂಡಿಸಲು ಯಾವುದೇ ಪ್ರಯತ್ನ್ನಗಳಾಗಲಿಲ್ಲ. ಈಗ ಈ ಕುರಿತು ಹಲವಾರು ನೊಂದ ಶಿಕ್ಷಕರು ನ್ಯಾಯಾಲದ ಮೊರೆ ಹೋಗಿದ್ದರಿಂದ ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚನ್ಯಾಯಾಲಯ ಅನುದಾನರಹಿತ ಸೇವೆಯನ್ನ್ನು ಎಲ್ಲ ಸೇವಾ ಸೌಲಭ್ಯಗಳಿಗೆ ವಿಸ್ತರಿಸಲು ಆದೇಶಿಸಿವೆ. ಈ ಆದೇಶಗಳು ಕೇವಲ ನ್ಯಾಯಾಲಯದ ಮೊರೆ ಹೋದವರಿಗೆ ಮಾತ್ರ ಸಿಗಲಿರುವುದರಿಂದ ಎಲ್ಲಾ ಸಿಬ್ಬಂದಿಗೂ ಇದನ್ನ್ನು ಅನ್ವಯಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಈ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ.
ಹೆಚ್ಚುವರಿ ಶಿಕ್ಷಕರ ಸಮಸ್ಯೆ, 2006ರ ನಂತರ ನೇಮಕಗೊಂಡ ಸರ್ಕಾರಿ, ಅನುದಾನಿತ ನೌಕರರಿಗೆ ಒಂದೇ ತರಹದ ಪಿಂಚಣಿ ಯೋಜನೆ ಜಾರಿ, 1994-95ನೇ ಸಾಲಿನವರೆಗೆ ಪ್ರಾರಂಭವಾಗಿರುವ ಅನುದಾನರಹಿತ ಪ್ರಾಥಮಿಕ, ಪ್ರೌಢ, ಪಪೂ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವುದು.  ಕರ್ನಾಟಕ ಶಿಕ್ಷಣ ಕಾಯ್ದೆ 1983ರಲ್ಲಿರುವ ಲೋಪ ತೆಗೆದು ಹಾಕುವ ಬಗ್ಗೆ ಚರ್ಚಿಸಿ ಹೋರಾಟ ರೂಪರೇಷೆ ರೂಪಿಸಬೇಕಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆ ಭರ್ತಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಹೋರಾಟದ ರೂಪುರೇಷೆ ನಿರ್ಧರಿಸಲು ಸಭೆ ಕರೆಯಲಾಗಿದ್ದು, ಶಿಕ್ಷಕರು ಪಾಲ್ಗೊಂಡು ಸಲಹೆ ಸೂಚನೆ ನೀಡಬೇಕೆಂದು ಹೊರಟ್ಟಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement