ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಡಾ.ಪೋತೆ ನೇಮಕ
ಧಾರವಾಡ: ಕರ್ನಾಟಕ ವಿವಿ ನೂತನ ಮೌಲ್ಯಮಾಪನ ಕುಲಸಚಿವರಾಗಿ ಗುಲ್ಬರ್ಗ ವಿವಿಯ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ.ಎಚ್.ಟಿ. ಪೋತೆ ಶನಿವಾರ ಅಧಿಕಾರ ವಹಿಸಿಕೊಂಡರು. ಕವಿವಿ ಮೌಲ್ಯಮಾಪನ ಕುಲಸಚಿವರಾಗಿದ್ದ ಡಾ.ಕೆ.ಆರ್. ದುರ್ಗಾದಾಸ ಅವರು ಡಾ.ಪೋತೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಸರ್ಕಾರದ ಆದೇಶದ ಮೇರೆಗೆ ಕವಿವಿ ಮೌಲ್ಯಮಾಪನ ಕುಲಸಚಿವರಾಗಿ ನೇಮಕಗೊಂಡ ಡಾ. ಪೋತೆ ಅವರು ಡಾ. ದುರ್ಗಾದಾಸ ಅವರನ್ನು ಬೀಳ್ಕೊಟ್ಟು, ವಿವಿಯ ಹೃದಯ ಭಾಗವಾಗಿ ಪರೀಕ್ಷಾಂಗ ವಿಭಾಗವು ಕೆಲಸ ಮಾಡುತ್ತದೆ. ಇಲ್ಲಿ ಎಲ್ಲವನ್ನು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಎಲ್ಲ ಅಧಿಕಾರಿಗಳು ಹಾಗೂ ನೌಕರ ವರ್ಗದವರ ಸಹಕಾರ ಅವಶ್ಯ ಎಂದರು.