ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕವಿವಿ ಮೌಲ್ಯಮಾಪನ ಕುಲಸಚಿವರಾಗಿ ಡಾ. ಪೋತೆ

Rashmi Kasaragodu
Updated On : 29 Sept 2013, 12:26 pm

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 28
ಕರ್ನಾಟಕ ವಿಶ್ವವಿದ್ಯಾಲಯದ ನೂತನ ಮೌಲ್ಯಮಾಪನ ಕುಲಸಚಿವರಾಗಿ ಗುಲ್ಬರ್ಗ ವಿವಿಯ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ.ಎಚ್.ಟಿ. ಪೋತೆ ಶನಿವಾರ ಅಧಿಕಾರ ವಹಿಸಿಕೊಂಡರು.
ಕವಿವಿ ಮೌಲ್ಯಮಾಪನ ಕುಲಸಚಿವರಾಗಿದ್ದ ಡಾ.ಕೆ.ಆರ್. ದುರ್ಗಾದಾಸ ಡಾ.ಪೋತೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಸರ್ಕಾರದ ಆದೇಶದ ಮೇರೆಗೆ ಕವಿವಿ ಮೌಲ್ಯಮಾಪನ ಕುಲಸಚಿವರಾಗಿ ನೇಮಕಗೊಂಡ ಡಾ. ಪೋತೆ, ಡಾ. ದುರ್ಗಾದಾಸ ಅವರನ್ನು ಬೀಳ್ಕೊಟ್ಟು, ವಿವಿಯ ಹೃದಯ ಭಾಗವಾಗಿ ಪರೀಕ್ಷಾಂಗ ವಿಭಾಗವು ಕೆಲಸ ಮಾಡುತ್ತದೆ. ಇಲ್ಲಿ ಎಲ್ಲವನ್ನು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಎಲ್ಲ ಅಧಿಕಾರಿಗಳು ಹಾಗೂ ನೌಕರ ವರ್ಗದವರ ಸಹಕಾರ ಅವಶ್ಯ ಎಂದರು.
ಅಧಿಕಾರ ಯಾವತ್ತೂ ಶಾಶ್ವತವಲ್ಲ. ಆದರೆ, ನಾವು ಮಾಡುವ ಕಾರ್ಯಗಳು ಫಲಪ್ರದ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಮಗೊಂದು ಸುವರ್ಣ ಅವಕಾಶ ಕೊಟ್ಟಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕುಲಪತಿಗಳ ಹಾಗೂ ಕುಲಸಚಿವರ ಮತ್ತು ವಿವಿಯ ಡೀನ್, ಹಿರಿಯ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ತಾವು ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಕವಿವಿ ಉಪ ಕುಲಸಚಿವರಾದ ಕವಳಿ, ಸಹಾಯಕ ಕುಲಸಚಿವರಾದ ಗೋಪಾಲ ಘಂಟಿ ಮುಂತಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement