ಪಾಶ್ಚಾತ್ಯ ಆಹಾರ ಪದ್ಧತಿಯಿಂದ ರೋಗ: ಶ್ರೀ
ಕುಂದಗೋಳ: ಇಂದಿನ ಜನಾಂಗ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಆಹಾರ ಪದ್ಧತಿ ಬದಲಾವಣೆಯಿಂದ ಅನೇಕ ರೋಗ ರುಜಿನಗಳು ಮನುಷ್ಯನಲ್ಲಿ ಸೇರಿಕೊಳ್ಳುತ್ತಿವೆ ಎಂದು ಮನಗುಂಡಿಯ ಶ್ರೀಗುರು ಮಹಾಮನೆ ಆಶ್ರಮದ ನಿಸರ್ಗ ಚಿಕಿತ್ಸಾ ತಜ್ಞರಾದ ಬಸವಾನಂದ ಸ್ವಾಮೀಜಿ ಹೇಳಿದರು. ಪಟ್ಟಣದ ಹರಭಟ್ಟ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಹರಭಟ್ಟ ಪಪೂ ಕಾಲೇಜು ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ವರ್ಧೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಟ್ಟಣದ ಬಸವಣ್ಣಜ್ಜನವರ ಕಲ್ಯಾಣಪುರ ಬಸಯ್ಯ ಸ್ವಾಮೀಜಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣೇಶ ಪೂಜಾರ, ಶೈಲಜಾ ಗಾಂವಕರ, ಶಂಕ್ರಪ್ಪ ಶಿವಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಎ. ಪೂಜಾರ, ಎಂ.ಎಫ್. ಪವಾಡಿ, ವಸಂತ, ಬಿ.ಎಸ್. ವರೂರ, ಆರ್.ವೈ. ಬ್ಯಾಹಟ್ಟಿ ಉಪಸ್ಥಿತರಿದ್ದರು. ಬಿ.ಎಂ. ಮುಂದಿನಮನಿ ಸ್ವಾಗತಿಸಿದರು. ಎಸ್.ವಿ. ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.