ಆಟೋ ಚಾಲಕರಿಗೆ ಆಮ್‌ಆದ್ಮಿ ಬಿಮಾ ಯೋಜನೆ
ಧಾರವಾಡ: ಆಟೋ ರಿಕ್ಷಾ ಚಾಲಕರಿಗಾಗಿ ಭಾರತ ಸರ್ಕಾರ ಎಲ್‌ಐಸಿಯೊಂದಿಗೆ ಕೈಜೋಡಿಸಿ ಆಮ್ ಆದ್ಮಿ ಬಿಮಾ ಯೋಜನೆ ಅನುಷ್ಠಾನಗೊಳಿಸಿದ್ದು, ಚಾಲಕರು ಸದುಪಯೋಗ ಪಡೆಯಬೇಕೆಂದು ಧಾರವಾಡ ಶಹರ ಆಟೋ ರಿಕ್ಷಾ ಚಾಲಕರ ಸಂಘ ತಿಳಿಸಿದೆ. ಯೋಜನೆಗೆ ಪಾತ್ರರಾಗಬೇಕಾದ ಅಭ್ಯರ್ಥಿ 18ರಿಂದ 59ರ ವಯೋವುತಿ ಇರಬೇಕು. ಚಾಲಕರು ಮಾಡಿಸಿದ ಪಾಲಿಸಿ ಹಣ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುತ್ತದೆ. ಯೋಜನೆಯಡಿಯಲ್ಲಿ ನೈಸರ್ಗಿಕ ಸಾವಿಗೆ ತುತ್ತಾದ ಪಾಲಿಸಿದಾರನಿಗೆ ರು. 30 ಸಾವಿರ, ಆಕಸ್ಮಿಕ ಸಾವಿಗೆ ರು. 75 ಸಾವಿರ, ಶಾಶ್ವತ ಅಂಗವಿಕಲತೆಗೆ ರು. 75 ಸಾವಿರ ಹಾಗೂ ಭಾಗಶಃ ಅಂಗವಿಕಲತೆಗೆ ರು. 37 ಸಾವಿರ ನೀಡಲಾಗುತ್ತದೆ. ಅಲ್ಲದೇ, ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆದ್ದರಿಂದ ಆಟೋ ಚಾಲಕರು ಆಮ್ ಆದ್ಮಿ ಬಿಮಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಪ್ರತಿನಿಧಿ ಎಂ.ಎಂ. ಬೇಪಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮೋಟಾರ್ ರಿವೈಂಡಿಂಗ್ ತರಬೇತಿ
ಧಾರವಾಡ: ಇಲ್ಲಿನ ರುಡ್‌ಸೆಟ್ ಸಂಸ್ಥೆಯಲ್ಲಿ ಮೋಟಾರ್ ರಿವೈಂಡಿಂಗ್ ತರಬೇತಿಯಲ್ಲಿ ಜರುಗಿತು. ರುಡ್‌ಸೆಟ್ ಸಂಸ್ಥೆಯ ಕೇಂದ್ರ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ ಮೂರ್ತಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಎಂ.ಡಿ. ವೀರಾಪುರ ಸ್ವಾಗತಿಸಿದರು. ಉಪನ್ಯಾಸಕ ಪ್ರದೀಪ ಮೇಲ್ಗಡೆ ನಿರೂಪಿಸಿದರು. ಉಪನ್ಯಾಸಕ ಜಗದೀಶ ಪೂಜಾರ ವಂದಿಸಿದರು.