ಫಲ-ಪುಷ್ಪ ಪ್ರದರ್ಶನ: ವಿಜೇತರಿಗೆ ಬಹುಮಾನ
ಧಾರವಾಡ: ಫಲ-ಪುಷ್ಪ ಪ್ರದರ್ಶನ ಅಂಗವಾಗಿ ಆರೋಗ್ಯದಲ್ಲಿ ತೋಟಗಾರಿಕೆಗಳ ಮಹತ್ವ ನಿಬಂಧ ಸ್ಪರ್ಧೆ 2013-14 ನೇ ಸಾಲಿಗೆ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕುಂದಗೋಳ ತಾಲೂಕಿನ ರಾಮನಕೊಪ್ಪ ಪ್ರೌಢಶಾಲೆಯ ಮೇಘಾ ಕಂಬಳಿಮಠ, ದ್ವಿತೀಯ ಸ್ಥಾನ ಹುಬ್ಬಳ್ಳಿ ತಾಲೂಕಿನ ಹಳಿಯಾಳ ಪ್ರೌಢಶಾಲೆಯ ಪುಷ್ಪಾವತಿ ಪತ್ತಾರ ಮತ್ತು ಕುಂದಗೋಳ ಪ್ರೌಢಶಾಲೆಯ ಪುಟ್ಟಪ್ಪ ನಿಂಗಪ್ಪ ಮಡಿವಾಳರ ಪಡೆದಿದ್ದಾರೆ. ತೃತೀಯ ಬಹುಮಾನ ಅಮರಗೋಳ ಪ್ರೌಢಶಾಲೆಯ ಅಂಕಿತಾ ಕದಂ, ಗೋಕುಲ ಪ್ರೌಢಶಾಲೆಯ ಅನ್ನಪೂರ್ಣಾ ಡಿ. ಲಮಾಣಿ ಹಾಗೂ ಕಲಘಟಗಿ ತಾಲೂಕಿನ ಚಳ್ಳಮಟ್ಟಿ ಪ್ರೌಢ ಶಾಲೆಯ ಶ್ರೀದೇವಿ ಶಿಂಧೆ ಬಹುಮಾನ ಪಡೆದಿರುತ್ತಾರೆ.
ಅಕ್ಟೋಬರ್ ತಿಂಗಳಲ್ಲಿ ಹುಬ್ಬಳ್ಳಿ ಇಂದಿರಾ ಗಾಜಿನ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದೆಂದು ಧಾರವಾಡ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.