ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಂಸ್ಕೃತಿ ಉಳಿಸಿದ ಜನಪದ ಸಾಹಿತ್ಯ

Mainashree
Updated On : 30 Sept 2013, 11:12 am

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 29
ಜನಪದ ಸಾಹಿತ್ಯ ಹೃದಯವಂತಿಕೆ ಉಳ್ಳದ್ದು, ಜನಪದ ಸಾಹಿತ್ಯಕ್ಕೆ ತಿದ್ದುಪಡಿ, ವಿಮರ್ಶೆ ಇಲ್ಲ. ನಮ್ಮ ಸಂಸ್ಕೃತಿಯನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದಿರುವ ಕಲೆ ಜನಪದ ಸಾಹಿತ್ಯ ಎಂದು ಸಿಎಸ್‌ಐ ಕಾಲೇಜಿನ ಡಾ. ಶಂಭು ಹೆಗಡಾಳ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಸವದತ್ತಿ ಜಾನಪದ ಕಲಾವಿದರಾದ ಸಂಗಮ್ಮ ಕಡಕೋಳ ಅವರ ಜಾನಪದ ಗೀತೆಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ಮಧ್ಯೆಯೂ ಗ್ರಾಮೀಣ ಸಂಸ್ಕೃತಿ ಕಲೆಯನ್ನು ಕಲಾವಿದರು ಜನಪದ ಕಲೆ ಉಳಿಸಿಕೊಂಡು ಬಂದಿದ್ದಾರೆ. ಕಲಾವಿದರನ್ನು ಗೌರವಿಸಿ, ಪುರಸ್ಕರಿಸುವ ಮೂಲಕ ಸಂಘ ಸಂಸ್ಥೆಗಳು ಈ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನರಸಿಂಹ ಪರಾಂಜಪೆ ಮಾತನಾಡಿದರು. ಇದೇ ಸಂದರ್ಭ ಜಾನಪದ ಕಲಾವಿದೆ ಸಂಗಮ್ಮ ಕಡಕೋಳ ಅವರನ್ನು ಸನ್ಮಾನಿಸಲಾಯಿತು.
ಶಿವಣ್ಣ ಬೆಲ್ಲದ, ಶಂಕರ ಹಲಗತ್ತಿ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಬಸವರಾಜ ಹೂಗಾರ, ಸಿ.ಜಿ. ಹಿರೇಮಠ, ಶಿವಶರಣ ಕಲಬಶೆಟ್ಟರ, ಎಂ.ಬಿ. ಹೆಗ್ಗೇರಿ, ಪ್ರೇಮಾ ಹೊರಟ್ಟಿ, ಮಹಾನಂದಾ ಮುದೇನಗುಡಿ ಇದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಅರ್ಜುನ್ ವಠಾರ ವಂದಿಸಿದರು. ನಂತರ ಸಂಗಮ್ಮ ಕಡಕೋಳ ಅವರಿಂದ ಸಂಗೀತ ಪ್ರಸ್ತುತಪಡಿಸಿದರು. ಅಲ್ಲಮಪ್ರಭು ಕಡಕೋಳ ತಬಲಾ ಹಾಗೂ ನಾಗರಾಜ ಕಮ್ಮಾರ ಹಾರ್ಮೋನಿಯಂ ಸಾಥ್ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement